ರಾಜ್ಯದಲ್ಲಿ 45,565 ಶಿಕ್ಷಕ ಹುದ್ದೆಗಳು ಖಾಲಿ ಇದೆ- ವಿಧಾನಸಭೆಯಲ್ಲಿ ಶಾಸಕ ರಾಜುಗೌಡ ಹೇಳಿಕೆ.

Promotion

ಬೆಂಗಳೂರು,ಸೆಪ್ಟಂಬರ್,15,2022(www.justkannada.in):  ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ವಿಧಾನಸಭೆ ಪ್ರಶ್ನೋತ್ತರ ಕಲಾಪದ ವೇಳೆ  ಶಿಕ್ಷಕರ ನೇಮಕಾತಿ ಕುರಿತು  ಶಾಸಕ ರಾಜುಗೌಡ ಪ್ರಶ್ನಿಸಿದರು.

ಸರ್ಕಾರ 32,159 ಶಿಕ್ಷಕರನ್ನ ತೆಗೆದುಕೊಂಡಿದೆ.  ರಾಜ್ಯದಲ್ಲಿ 45,565 ಹುದ್ದೆ ಖಾಲಿ ಇದೆ. ಕಲ್ಯಾಣ ಕರ್ನಾಟಕದಲ್ಲಿ18,477 ಹುದ್ದೆಗಳು ಖಾಲಿ ಇದೆ. ರಾಜ್ಯದಲ್ಲಿ ಶೇ. 40 ರಷ್ಟ ಹುದ್ದೆ ಖಾಲಿ ಇದ್ದು, ನಾವು ಫಲಿತಾಂಶದ ಕೊನೆ ಸ್ಥಾನ ಪಡೆದಿದ್ದೇವೆ ಎಂದು ರಾಜುಗೌಡ  ತಿಳಿಸಿದರು.

ರಾಜುಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ  ಬಿಸಿ ನಾಗೇಶ್,  ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ಕೊರತೆ ಇದೆ.  ರಾಜ್ಯ 16 ಮಕ್ಕಳಿಗೆ ಒಬ್ಬ ಶಿಕ್ಷಕ ಹೈದರಬಾದ್-ಕರ್ನಾಟಕ ಭಾಗದಲ್ಲಿ 25 ವಿದ್ಯಾರ್ಥಿಗಳಿಗೆ ಗೆ ಒಬ್ಬ ಶಿಕ್ಷಕ ಇದ್ದಾರೆ.   ಹೈದರಬಾದ್-ಕರ್ನಾಟಕಕ್ಕೆ 5 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದರು.

Key words: 45,565 teacher- posts – vacant  – MLA Raju Gowda