ಕೆಆರ್ ಎಸ್ ನಿಂದ 40 ಸಾವಿರ ಕ್ಯೂಸೆಕ್ ನೀರು ಬಿಡುಗಡೆ: ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ..

Promotion

ಮಂಡ್ಯ,ಸೆಪ್ಟಂಬರ್,21,2020(www.justkannada.in): ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದ್ದು ಕಾವೇರಿ ನದಿಗೆ ನೀರು ಹೆಚ್ಚಾಗಿ ಹರಿದು ಬರುತ್ತಿದ್ದು, ಈ ಹಿನ್ನೆಲೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ  ಕೆ.ಆರ್.ಎಸ್. ಡ್ಯಾಂಗೆ ಹೆಚ್ಚಿನ ನೀರು ಬಿಡುಗಡೆ ಮಾಡಲಾಗಿದೆ.jk-logo-justkannada-logo

ಕೆಆರ್ ಎಸ್ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಈ ಹಿನ್ನೆಲೆ ಡ್ಯಾಂ ನಿಂದ ಕಾವೇರಿ ನದಿಗೆ 40 ಸಾವಿರ ಕ್ಯೂಸೆಕ್ ನೀರುನನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಮಧ್ಯಾಹ್ನದ ವೇಳೆಗೆ ಡ್ಯಾಂ ನಿಂದ ಮತ್ತಷ್ಟು ಹೆಚ್ಚು ನೀರು ರಿಲೀಸ್ ಮಾಡುವ ಸಾಧ್ಯತೆ ಇದ್ದು ಇದರಿಂದಾಗಿ ಕಾವೇರಿ ನದಿ ಪಾತ್ರದಲ್ಲಿನ ಜನರಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ.40000-cusec-water-release-krs-dam-flooding-role-river-caveri

ಹೀಗಾಗಿ ಡ್ಯಾಂ ಕೆಳಭಾಗದ ನದಿಪಾತ್ರದ ಜನರಿಗೆ ಕಾವೇರಿ ನೀರಾವರಿ ನಿಗಮದಿಂದ ಪ್ರವಾಹದ ಬಗ್ಗೆ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗಿದೆ. ಎಚ್ಚರಿಕೆಯಿಂದಿರುವಂತೆ ನದಿ ಪಾತ್ರ ಗ್ರಾಮದಲ್ಲಿ ಜನರಿಗೆ ವಾಹನದ ಮೂಲಕ ಪ್ರವಾಹ ಪ್ರಕಟಣೆ ಮಾಡಲಾಗಿದೆ.

Key words: 40,000 cusec –water- release – KRS-dam- flooding – role – river caveri.