ನನ್ನ 40 ವರ್ಷದ ರಾಜಕಾರಣ  ಮುಗಿಸುವ ಯತ್ನ: ಇದು ಅಂತ್ಯವಲ್ಲ ಆರಂಭ- ರೋಡ್ ಶೋನಲ್ಲಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗುಡುಗು..

ಬೆಂಗಳೂರು,ಅ,26,2019(www.justkannada.in): ನನ್ನ 40 ವರ್ಷದ ರಾಜಕಾರಣ  ಮುಗಿಸಲು ಷಡ್ಯಂತ್ರ ನಡದಿದೆ. ನಡೆದಿತ್ತು. ಆದರೇ ನಾನು ಇದ್ಯಾವುದಕ್ಕೂ ಹೆದರುವ ಮಗನಲ್ಲ. ಇದು ಅಂತ್ಯವಲ್ಲ. ಆರಂಭ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗುಡುಗಿದ್ದಾರೆ.

 ಜಾಮೀನಿನ ಮೇಲೆ ಬಿಡುಡೆಯಾದ ಬಳಿಕ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ನಂತರ   ತೆರೆದ ವಾಹನದಲ್ಲಿ ಡಿ.ಕೆ ಶಿವಕುಮಾರ್ ಮೆರವಣಿಗೆ ನಡೆಯಿತು. ಸಾದರಹಳ್ಳಿಯ ಗೇಟ್ ಬಳಿ ಕಾರ್ಯಕರ್ತರು, ಅವರ ಅಪಾರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಡಿಕೆ ಶಿವಕುಮಾರ್,  ನನಗಾಗಿ ಹಗಲು ರಾತ್ರಿ ನೀವು ಹೋರಾಟ ಮಾಡಿದ್ದೀರಿ. ಅನ್ಯಾಯದ ವಿರುದ್ದ ಪ್ರತಿಭಟನೆ ಮಾಡಿದ್ದೀರಿ. ನಾನು ನಿಮ್ಮ ಋಣಕ್ಕೆ ನಾನು ಚಿರರುಣಿ. ಸಣ್ಣ ಹನಿ ನದಿಯಾಗಿ ಹರಿದು, ಸಮುದ್ರದಷ್ಟು ದೊಡ್ಡದಾಗಿದೆ.  ನಿಮ್ಮ ಋಣ ಹೇಗೆ ತೀರಿಸಬೇಕೆಂಬುದು ಗೊತ್ತಿಲ್ಲ ಎಂದರು.

ನಾನು ಲಂಚ ಹೊಡೆದಿಲ್ಲ. ಯಾರಿಗೂ ಮೋಸ ಮಾಡಿಲ್ಲ. ಯಾರಿಗೂ ಕೇಡು ಬಯಸಿಲ್ಲ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಋಣಿ. ಇಂದು ಒಂದು ದಿನಕ್ಕೆ ಮುಗಿಯುವುದಿಲ್ಲ.  ಇದು ಅಂತ್ಯವಲ್ಲ ಪ್ರಾರಂಭ. ನನ್ನ ಸ್ನೇಹಿತರಿಗೆ ಸಂಬಂಧಿಗಳಿಗೆ ಕೊಟ್ಟ ಕಿರುಕುಳ ನೋಡಿದ್ದೀರಿ. ಈ ವೇಳೆ ನನಗೆ ಶಾಸಕರು, ಕನ್ನಡಪರ ಸಂಘಟನೆಗಳು ನನ್ನ ಸಮುದಾಯ ಸಂಘಗಳು ಬೆಂಬಲ ನೀಡಿದ್ದೀರಿ. ನಾನು ಯಾವುದಕ್ಕೂ ಹೆದರುವ ಮಗ ಅಲ್ಲ.   ನಾನು ಒಂದು ಕುಟಂಬದ ಆಸ್ತಿ ಅಲ್ಲ. ನಿಮ್ಮೆಲ್ಲರ ಆಸ್ತಿ ಎಂದು ಡಿಕೆಶಿ ನುಡಿದರು.

Key words:  40 year –politics-try- finish- former Minister- DK Sivakumar -Road Show.