3ನೇ ಸಿಎಂ ಕೂಗು ಬಿಜೆಪಿ ವಲಯದಲ್ಲೇ ಕೇಳಿ ಬಂದಿದೆ: ಮೊದಲು ನಿಮ್ಮ ನಾಯಕರನ್ನ ಕಂಟ್ರೋಲ್ ಮಾಡಿ- ಶಾಸಕ ಪ್ರಿಯಾಂಕ್ ಖರ್ಗೆ.

Promotion

ಬೆಂಗಳೂರು,ಆಗಸ್ಟ್,10,2022(www.justkannada.in): ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ ಬೆನ್ನಲ್ಲೆ ಒಬ್ಬರ ಮೇಲೊಬ್ಬರು ಮುಗಿಬಿದ್ದು ಕಾಂಗ್ರೆಸ್ ಗೆ ಟಾಂಗ್ ನೀಡುತ್ತಿರುವ ಬಿಜೆಪಿ ನಾಯಕರಿಗೆ ಶಾಸಕ ಪ್ರಿಯಾಂಕ್ ಖರ್ಗೆ ಚಾಟಿ ಬೀಸಿದ್ದಾರೆ.

3ನೇ ಸಿಎಂ ಕೂಗು ಬಿಜೆಪಿ ವಲಯದಲ್ಲೇ ಕೇಳಿ ಬಂದಿದೆ. ಕಾಂಗ್ರೆಸ್ ಪಾಳಯದಲ್ಲಿ ಅಲ್ಲ. ನಿಮ್ಮ ಪಕ್ಷದವರೇ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಆಗಸ್ಟ್ 15 ಮುಂಚೆ ಬದಲಾವಣೆ ಎಂದು ಹೇಳಿದ್ದು ಯಾರು..?  ಸುರೇಶ್ ಗೌಡರು ಮಾತನಾಡಿಲ್ವಾ..? ಹೆಚ್ ವಿಶ್ವನಾಥ್ ಮಾತನಾಡಿಲ್ವಾ..? ಎಂದು ಪ್ರಶ್ನಿಸಿದರು.

ಮೊದಲು ನಿಮ್ಮ ನಾಯಕರನ್ನ ಕಂಟ್ರೋಲ್ ಮಾಡಿ. ಅಮೇಲೆ ಕಾಂಗ್ರೆಸ್ ಬಗ್ಗೆ ಮಾತನಾಡಿ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

Key words: 3rd CM – heard – BJP –circle-MLA -Priyank Kharge.