ದೇಶದಲ್ಲಿ ಒಂದೇ ದಿನ 37,148 ಕೊರೋನಾ ಪ್ರಕರಣ ಪತ್ತೆ…

Promotion

ನವದೆಹಲಿ,ಜು,21,2020(www.justkannada.in):  ದೇಶದಲ್ಲಿ ಒಂದೇ ದಿನ 37,148 ಮಂದಿಯಲ್ಲಿ ಕೊರೋನಾ ವೈರಸ್ ಸೋಂಕು  ಪತ್ತೆಯಾಗಿದ್ದು ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 11,55,191ಕ್ಕೆ ಏರಿಕೆಯಾಗಿದೆ.jk-logo-justkannada-logo

ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ 587 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ಕೊರೋನಾಗೆ ಬಲಿಯಾದವರ ಸಂಖ್ಯೆ ಈವರೆಗೆ 28,084ಕ್ಕೆ ಏರಿಕೆಯಾಗಿದೆ. ಇನ್ನು 11,55,191 ಸೋಂಕಿತರ ಪೈಕಿ 7,24,578 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ  ಡಿಸ್ಚಾರ್ಜ್ ಆಗಿದ್ದಾರೆ.37148-corona-cases-detected-single-day

ದೇಶದಲ್ಲಿ ಒಟ್ಟು  4,02,529 ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ ನಿನ್ನೆ ಅತೀ ಹೆಚ್ಚು 8240 ಪ್ರಕರಣ ದಾಖಲಾಗಿದ್ದು, 176 ಮಂದಿ ಸಾವನ್ನಪ್ಪಿದ್ದಾರೆ.  ತಮಿಳುನಾಡಿನಲ್ಲಿ 4985 ಕೇಸು, 70 ಸಾವು, ಕರ್ನಾಟಕದಲ್ಲಿ 3684 ಕೇಸು 72 ಸಾವು ಸಂಭವಿಸಿದೆ.

Key words: 37,148 -Corona -cases -detected – single day