ಕೆಆರ್ ಎಸ್ ಜಲಾಶಯದಿಂದ 33,168 ಕ್ಯೂಸೆಕ್ ನೀರು ಬಿಡುಗಡೆ.

Promotion

ಮಂಡ್ಯ,ಜುಲೈ,9,2022(www.justkannada.in): ಕಾವೇರಿ ಜಲಾನಯನ ಪ್ರದೇಶದಲ್ಲಿ  ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಜಲಾಶಯದಿಂದ ನೀರನ್ನ ಹೊರಬಿಡಲಾಗುತ್ತಿದೆ.

ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಕೆ.ಆರ್ ಎಸ್ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಈ ಹಿನ್ನೆಲೆಯಲ್ಲಿ  33,168 ಕ್ಯೂಸೆಕ್ ನೀರನ್ನ ಹೊರಕ್ಕೆ ಬಿಡಲಾಗಿದೆ. ಕೆಆರ್ ಎಸ್ ನೀರಿನ ಮಟ್ಟ 124.80 ಅಡಿ ಇದ್ದು. ಪ್ರಸ್ತುತ ನೀರಿನ ಮಟ್ಟ 121.93 ಅಡಿ ಇದೆ. ಜಲಾಶಯ ಭರ್ತಿಯಾಗಲು ಕೇವಲ ಮೂರು ಅಡಿ ಮಾತ್ರ ಬಾಕಿ ಇದೆ.

ಇನ್ನು ಹೆಚ್ಚಾಗಿ ನೀರು ಜಲಾಶಯ ಸೇರುತ್ತಿರುವ ಹಿನ್ನೆಲೆ ಹೊರ ಹರಿವಿನ ಪ್ರಮಾಣ ಹೆಚ್ಚಿಸಲು ನಿರ್ಧಾರ ಮಾಡಲಾಗಿದೆ. ಇನ್ನು ನದಿಗೆ ಇಳಿಯದಂತೆ ಜಾನುವಾರುಗಳನ್ನ ಬಿಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಎಚ್ಚರಿಕೆ ನೀಡಲಾಗಿದೆ.

Key words: 33,168 cusecs- water -released -KRS reservoir.