ಮಂಡ್ಯ ಎಂಪಿ ಚುನಾವಣೆಗೆ 30 ಕೋಟಿ ಖರ್ಚು: ಎಲ್.ಆರ್.ಶಿವರಾಮೇಗೌಡ ‘ಆಡಿಯೋ ಬಾಂಬ್’ !

Promotion

ಬೆಂಗಳೂರು, ಜನವರಿ 30, 2022 (www.justkannada.in): ಮಂಡ್ಯದ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲೋಕಸಭಾ ಉಪಚುನಾವಣೆಗೆ 30 ಕೋಟಿ ರೂಪಾಯಿ ಖರ್ಚು ಮಾಡಿದ್ದೆ ಎಂಬ ಮಾತುಗಳು ಆಡಿಯೋ ಕ್ಲಿಪ್ ನಲ್ಲಿವೆ. ಇದು ಸೋಷಿಯಲ್  ಮೀಡಿಯಾದಲ್ಲಿ ಎಲ್ಲೆಡೆ ಹರಿದಾಡುತ್ತಿದೆ.

ವೈರಲ್ ಆದ ಆಡಿಯೋದಲ್ಲಿ ಜೆಡಿಎಸ್ ಮಹಿಳೆ ಕಾರ್ಯಕರ್ತೆ ಜೊತೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಈ ಕುರಿತು ಎಲ್ ಆರ್ ಶಿವರಾಮೇಗೌಡ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಲೋಕಸಭಾ ಉಪಚುನಾವಣೆಗೆ 30 ಕೋಟಿ ರೂಪಾಯಿ ಖರ್ಚು ಮಾಡಿದ್ದೆ. ಚುನಾವಣೆ ಎದುರಿಸುವುದು ಸರಳವಲ್ಲ ಎಂಬ ಮಾತಿಗಳು ವೈರಲ್ ಆದ ಆಡಿಯೋ ಕ್ಲಿಪ್ ನಲ್ಲಿವೆ.