ಪಂಚಮಸಾಲಿ ಸಮುದಾಯಕ್ಕೆ 2ಎ ಅಡಿ  ಮೀಸಲಾತಿ ನೀಡಬಾರದು- ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಸಭೆಯಲ್ಲಿ ನಿರ್ಣಯ.

ಮೈಸೂರು,ಸೆಪ್ಟಂಬರ್,12,2021(www.justkannada.in):  ಯಾವುದೇ ಜಾತಿಗೂ 2ಎ ಮೀಸಲಾತಿಯನ್ನ ವಿಸ್ತರಿಸಲು ಅವಕಾಶ ನೀಡಬಾರದು, ಕಾಂತಾರಾಜು ನೇತೃತ್ವದ ಸಮಿತಿ ಸಲ್ಲಿಸಿರುವ ಜಾತಿ ಗಣತಿ ವರದಿಯನ್ನ ಸರ್ಕಾರ ಜಾರಿ ಮಾಡಬೇಕು ಎಂಬ ನಿರ್ಣಯಗಳನ್ನು ನಗರದಲ್ಲಿ ನಡೆದ ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

21 ಜಾತಿಗಳನ್ನು ಒಳಗೊಂಡ ಒಕ್ಕೂಟದ ಸಭೆಯಲ್ಲಿ ಪಂಚಮಸಾಲಿ ಸಮುದಾಯ ಒಳಗೊಂಡಂತೆ ಯಾವುದೇ ಜಾತಿಯನ್ನು 2ಎ ಮೀಸಲಾತಿಯಡಿ ಸೇರಿಸಿದರೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಪುಟ್ಟಸಿದ್ಧಶೆಟ್ಟಿ ಮಾತನಾಡಿ ಸಂವಿಧಾನವು ನಮಗೆ ಮೀಸಲಾತಿ ನೀಡಿದ್ದು,  ಕಾಯಕ ಸಮುದಾಯಗಳು 2ಎ ಅಡಿ ಸೌಲಭ್ಯ ಪಡೆಯುತ್ತಿವೆ. ಅದು ಮುಂದುವರೆದ ಜಾತಿಗಳಿಗೆ ಹೊಟ್ಟೆಕಿಚ್ಚು ಉಂಟು ಮಾಡಿದೆ. ನಮ್ಮ ಮಕ್ಕಳ ಶಿಕ್ಷಣ ಯುವಜನರ ಉದ್ಯೋಗ ಕಿತ್ತುಕೊಳ್ಳಲು ಮುಂದಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದಲ್ಲಿ ಮುಂದುವರೆದಿರುವ ಪಂಚಮಸಾಲಿ ಸಮುದಾಯ 2ಎ ಮೀಸಲಾತಿ ಬೇಕೆಂದು ಕೇಲುತ್ತಿದೆ. ಸಮುದಾಯ ಈಗಾಗಲೇ ಶೇ.5 ಮೀಸಲಾತಿ ನಡೆಯುತ್ತಿದೆ. ಪಂಚಮಸಾಲಿಗಳಿಗೆ 2ಎ ಅಡಿ  ಮೀಸಲಾತಿ ನೀಡಬಾರದು ಎಂಬುದೇ ನಮ್ಮ ಆಗ್ರಹ ಎಂದರು.

Key words: 2A –reservation-  not Panchamasalis-Decision -mysore