ಚಾಮರಾಜನಗರಕ್ಕೆ 250 ಆಕ್ಸಿಜನ್ ಸಿಲಿಂಡರ್ ಕಳಿಸಲಾಗಿದೆ- ಮೈಸೂರು ಜಿಲ್ಲಾಡಳಿತ ಸ್ಪಷ್ಟನೆ….

Promotion

ಮೈಸೂರು, ಮೇ,3,2021(www.justkannada.in):   ಮೈಸೂರಿನಿಂದ ಆಕ್ಸಿಜನ್ ಪೂರೈಕೆಯಾಗದೆ ಇದ್ದುದ್ದರಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 22 ಮಂದಿ ರೋಗಿಗಳು ಸಾವನ್ನಪ್ಪಿದ್ದಾರೆಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕುರಿತು ಮೈಸೂರು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.jk

ನಿನ್ನೆ ರಾತ್ರಿ 12.30 ರವರೆಗೂ ಮೈಸೂರಿನಿಂದ ಚಾಮರಾಜನಗರಕ್ಕೆ ಒಟ್ಟು‌ 250 ಆಕ್ಸಿಜನ್ ಸಿಲಿಂಡರ್ ಕಳಿಸಲಾಗಿದೆ. ಆಕ್ಸಿಜನ್ ಲಿಕ್ವಿಡ್ ಬಳ್ಳಾರಿ ಯಿಂದ ಚಾಮರಾಜನಗರಕ್ಕೆ ಬರಬೇಕಿತ್ತು ಅದನ್ನು ಸರಿಯಾದ ಸಮಯದಲ್ಲಿ ಬಂದಿದ್ದೇಯಾ ಇಲ್ಲವೋ ಗೊತ್ತಿಲ್ಲ. ಚಾಮರಾಜನಗರದವರ ಬೇಡಿಕೆಯಂತೆ ಮಾನವೀಯ ದೃಷ್ಟಿಯಿಂದ ಆಕ್ಸಿಜನ್ ಸಿಲಿಂಡರ್ ಕಳಿಸಲಾಗಿದೆ ಎಂದು ಮೈಸೂರು ಜಿಲ್ಲಾಡಳಿತ ತಿಳಿಸಿದೆ.250-oxygen-cylinder-sent-chamarajanagar-mysore-district-administration-information

ಈ ವಿಚಾರದಲ್ಲಿ ಮೈಸೂರು ಜಿಲ್ಲಾಡಳಿತ ವಿಳಂಬ ಮಾಡಿಲ್ಲ. ನಾವು ಅಧಿಕೃತ ವಾಗಿ 250 ಆಕ್ಸಿಜನ್ ಸಿಲಿಂಡರ್ ನಿನ್ನೆ ಮಧ್ಯರಾತ್ರಿಯ ವೇಳೆಗೆ ಕಳಿಸಿರೋದು ದಾಖಲೆಯಲ್ಲಿದೆ. ಮೈಸೂರಿನ ಸೌತ್ರನ್ ಗ್ಯಾಸ್ ನಿಂದ 210 ಹಾಗೂ ಮೈಸೂರು ಜಿಲ್ಲಾ ಆಸ್ಪತ್ರೆಯಿಂದ 40 ಆಕ್ಸಿಜನ್ ಗ್ಯಾಸ್ ಸಿಲಿಂಡರ್ ಚಾಮರಾಜನಗರಕ್ಕೆ ನಿನ್ನೆ ಮಧ್ಯರಾತ್ರಿಯೆ ರವಾನೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ENGLISH SUMMARY….

Mysuru District Administration clarifies that 250 oxygen cylinders have been sent to Chamarajanagara
Mysuru, May 3, 2021 (www.justkannada.in): Following allegations that due to non-fulfillment of the required amount of oxygen cylinders from Mysuru 23 people lost their lives at the Chamarajanagara District Hospital, the District Administration of Mysuru has given its clarification.
According to the information provided by the District Administration of Mysuru, 250 oxygen cylinders were sent to Chamarajanagara at 12.30 midnight. Additional oxygen cylinders were supposed to arrive from Ballari, but we are not sure whether it has been delivered or not. However, on a humanitarian basis, we have sent the oxygen cylinders to Chamarajanagara.
The Mysuru District Administration has not delayed in sending the oxygen cylinders. We have documents about sending it at the midnight. While 210 cylinders were dispatched from the Southern Gas in Mysuru, 40 cylinders were dispatched from the Mysuru District Hospital to Chamarajanagara.
Keywords: Mysuru District Administration/ 250 oxygen cylinders/ dispatched yesterday midnight/ Chamarajanagara/ District Hopsital

Key words: 250 oxygen –cylinder- sent –Chamarajanagar-Mysore- District Administration- Information.