ಸಾರಿಗೆ ಇಲಾಖೆಗೆ 2,200 ಕೋಟಿಗೂ ಹೆಚ್ಚು ನಷ್ಟ- ಡಿಸಿಎಂ ಲಕ್ಷ್ಮಣ್ ಸವದಿ…

2,200 crore -loss -Transport Department- DCM- Laxman Savadi.
Promotion

ಕಲ್ಬುರ್ಗಿ,ಜೂ,8,2020(www.justkannada.in): ಕೊರೋನಾ ಹಿನ್ನೆಲೆ ಲಾಕ್ ಡೌನ್ ನಿಂದಾಗಿ ಸಾರಿಗೆ ಇಲಾಖೆಗೆ ಇಲ್ಲಿಯವರೆಗೆ 2200 ಕೋಟಿಗೂ ಹೆಚ್ಚು ನಷ್ಟವಾಗಿದೆ. ಮುಂದೇನು ಕ್ರಮ ಕೈಗೊಳ್ಳಬೇಕು ಎಂದು ನಿರ್ಧಾರ ಮಾಡಲಾಗುತ್ತದ ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ತಿಳಿಸಿದರು.

ಕಲ್ಬರ್ಗಿಯಲ್ಲಿ ಇಂದು ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ಎಲ್ಲಾ ಇಲಾಖೆಗಳಿಗಿಂತ ಸಾರಿಗೆ ಇಲಾಖೆಗೆ ಹೆಚ್ಚು ನಷ್ಟ ಆಗಿದೆ. ನಷ್ಟ ಸರಿದೂಗಿಸಲು ಬಸ್ ದರ ಏರಿಕೆ ಮಾಡಲ್ಲ. ಸಿಬ್ಬಂದಿಗಳ ವೇತನ ಕಡಿತ ಮಾಡಲ್ಲ. ಕಡ್ಡಾಯ ರಜೆ ತೆಗೆದುಕೊಳ್ಳುವಂತೆ ಸಿಬ್ಬಂದಿಗೆ ಹೇಳಿಲ್ಲ ಎಂದು ತಿಳಿಸಿದರು.2,200 crore -loss -Transport Department- DCM- Laxman Savadi.

ಹಾಗೆಯೇ ಮಹಾರಾಷ್ಟ್ರ ಹೊರತುಪಡಿಸಿ ಬೇರೆ ರಾಜ್ಯಗಳಿಗೆ ಬಸ್ ಓಡಿಸಲು ಚಿಂತನೆ ನಡೆಸಲಾಗಿದೆ. ಎಸಿ. ಬಸ್ ಗಳ ಸಂಚಾರಕ್ಕೆ ಬುಕ್ಕಿಂಗ್ ಆರಂಭವಾಗಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ತಿಳಿಸಿದರು.

ಬಿಜೆಪಿಯಲ್ಲಿ ಭಿನ್ನಾಭಿಪ್ರಾಯದ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಲಕ್ಷ್ಮಣ್ ಸವದಿ,ಸಣ್ಣಪುಟ್ಟ ಸಮಸ್ಯೆ ಇದೆ. ಅದನ್ನ ಸಿಎಂ ಬಿಎಸ್ ಯಡಿಯೂರಪ್ಪ ಬಗೆಹರಿಸುತ್ತಾರೆ. ರಾಜ್ಯ ಸರ್ಕಾರಕ್ಕೆ ಬರುವ ಆದಾಯ ಕಡಿಮೆ. ಅನುದಾನ ನೀಡಲು ಆಗುತ್ತಿಲ್ಲ. ಹೀಗಾಗಿ ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು.

Key words: 2,200 crore -loss -Transport Department- DCM- Laxman Savadi.