2020 ಫಿಲ್ಂ ಫೇರ್ ಅವಾರ್ಡ್: ಇರ್ಫಾನ್​ ಖಾನ್​, ತಾಪ್ಸೀ ಪನ್ನುಗೆ ಉತ್ತಮ ನಾಯಕ, ನಾಯಕಿ ಪ್ರಶಸ್ತಿ

Promotion

ಬೆಂಗಳೂರು, ಮಾರ್ಚ್ 28, 2021 (www.justkannada.in): 2020 ನೇ ಸಾಲಿನ ಫಿಲಂ ಫೇರ್ ಅವಾರ್ಡ್ ಪ್ರಕಟವಾಗಿದೆ. ಶನಿವಾರ ರಾತ್ರಿ ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಅನೇಕ ಬಾಲಿವುಡ್​ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

‘ತಪ್ಪಡ್​’ ಸಿನಿಮಾದಲ್ಲಿನ ನಟನೆಗಾಗಿ ತಾಪ್ಸೀ ಪನ್ನು ಅವರು ಅತ್ಯುತ್ತಮ ನಟಿ ಪ್ರಶಸ್ತಿ, ‘ಅಂಗ್ರೇಜಿ ಮೀಡಿಯಂ’ ಸಿನಿಮಾಕ್ಕಾಗಿ ಇರ್ಫಾನ್​ ಖಾನ್​ ಅವರಿಗೆ ‘ಅತ್ಯುತ್ತಮ ನಟ’ ಪ್ರಶಸ್ತಿ ಸಿಕ್ಕಿದೆ.
ಬಿಗ್ ಬಿ ಅಭಿನಯದ ‘ ಗುಲಾಬೋ ಸಿತಾಬೋ ‘ ಚಿತ್ರಕ್ಕೆ 66 ನೇ ವಿಮಲ್ ಎಲೈ ಫಿಲಂ ಫೇರ್ ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ಸಂಭಾಷಣೆಗಾಗಿ ‘ ಗುಲಾಬೋ ಸಿತಾಬೋ ‘ ಚಿತ್ರಕ್ಕೆ ನೀಡಲಾಗಿದೆ . ಬೆಸ್ಟ್ ಕಾಮ್ ಡಿಸೈನರ್ ಪ್ರಶಸ್ತಿಯನ್ನು ಗುಲಾಬೋ ಸಿತಾಬೋ ‘ ಚಿತ್ರಕ್ಕಾಗಿ ವೀರ್ ಕಪೂರ್ ಪಡೆದುಕೊಂಡಿದ್ದಾರೆ . ಜೂಹಿ ಚತುರ್ವೇದಿ ಅತ್ಯುತ್ತಮ ಸಂಭಾಷಣೆಗಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ .

‘ದಿಲ್ ಬೇಚಾರ ‘ ಚಿತ್ರಕ್ಕಾಗಿ ಫರ್ಹಾಖಾನ್ ಬೆಸ್ಟ್ ಕೊರಿಯೋಗ್ರಾಪರ್‌ ಪ್ರಶಸ್ತಿ ಪಡೆದಿದ್ದಾರೆ . ‘ ಲೂಡೋ ‘ ಚಿತ್ರಕ್ಕಾಗಿ ಪ್ರೀತಮ್ ಅತ್ಯುತ್ತಮ ಸಂಗೀತ ಪ್ರಶಸ್ತಿ , ಕಾಜೋಲ್ ಅಭಿನಯದ ‘ ದೇವಿ ‘ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಬೆಸ್ಟ್ ಪ್ಲೇ ಬ್ಯಾಕ್ ಗಾಯಕ ಪ್ರಶಸ್ತಿಯನ್ನು ‘ ಏಕ್ ತುಕಾ ಧೂಪ್ ‘ ಚಿತ್ರಕ್ಕೆ ರಾಘವ್ ಚೈತನ್ಯ ಪಡೆದುಕೊಂಡಿದ್ದಾರೆ.

ಅಸೀಸ್ ಕೌರ್ ಅತ್ಯುತ್ತಮ ಗಾಯಕಿ ಪ್ರಶಸ್ತಿಯನ್ನು ‘ ಮಲಾಂಗ್ ‘ ಚಿತ್ರದ ಶೀರ್ಷಿಕೆ ಗೀತೆಗಾಗಿ ಪಡೆದುಕೊಂಡಿದ್ದಾರೆ . ಬೆಸ್ಟ್ ಎಡಿಟಿಂಗ್ ಪ್ರಶಸ್ತಿಯನ್ನು ಯಶ ಪುಷ್ಪಾ ರಾಮ್ ಚಂದಾನಿ ಪಡೆದುಕೊಂಡಿದ್ದಾರೆ .