ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಪ್ರತಿಮನೆಗೆ 200 ಯುನಿಟ್  ಉಚಿತ ವಿದ್ಯುತ್ – ಡಿ.ಕೆ ಶಿವಕುಮಾರ್ ಘೋಷಣೆ.

Promotion

ಬೆಳಗಾವಿ,ಜನವರಿ,11,2023(www.justkannada.in):  ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಪ್ರತಿಮನೆಗೆ 200 ಯುನಿಟ್  ಉಚಿತ ವಿದ್ಯುತ್  ನೀಡಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.

ಬೆಳಗಾವಿಯಲ್ಲಿ ಇಂದಿನಿಂದ ಕಾಂಗ್ರೆಸ್ ನಿಂದ ಪ್ರಜಾಧ್ವನಿ ಬಸ್ ಯಾತ್ರೆ ಆರಂಭವಾಗಿದೆ. ಚಿಕ್ಕೊಡಿಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್,  ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ನೀಡುತ್ತೇವೆ. ಇನ್ಮುಂದೆ ಕರೆಂಟ್ ಗೆ ದುಡ್ಡು ಕೊಡಬೇಕಿಲ್ಲ. ಇದು ಕಾಂಗ್ರೆಸ್ ಪಕ್ಷದ ಸಂಕಲ್ಪ ಎಂದರು.

ಬಿಜೆಪಿ ನಾಯಕರ ಪಾಪದ ಕೊಡ ತುಂಬಿದೆ. ಹೀಗಾಗಿ ಜನರ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಮೀಸಲಾತಿ ವಿಚಾರದಲ್ಲಿ ನಾಟಕ ಮಾಡುತ್ತಿದ್ದಾರೆ.  ಜನರ ಬೆನ್ನಿಗೆ ಚೂರಿ ಹಾಕಲು ಯತ್ನಿಸುತ್ತಿದ್ದಾರೆ . ಜನರ ಭರವಸೆ ಈಡೇರಿಸಿಲ್ಲ ಎಂದು  ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

Key words: 200 units -free electricity – Congress – power-D.K Shivakumar.