“ಫೆ.19ರಂದು ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಉದ್ಯೋಗಮೇಳ”

ಮೈಸೂರು,ಫೆಬ್ರವರಿ,17,2021(www.justkannada.in) : ಲಾಕ್ ಡೌನ್ ನಿಂದಾಗಿ ಲಕ್ಷಾಂತರ ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದು, ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ಯೋಗ ಕಲ್ಪಿಸಿಕೊಡುವ ಉದ್ದೇಶದಿಂದ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಫೆ.19ರಂದು ಉದ್ಯೋಗಮೇಳವನ್ನು ಆಯೋಜಿಸಲಾಗಿದೆ.jkಅಂದು ಬೆಳಿಗ್ಗೆ 10 ಗಂಟೆಗೆ  ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಕೌಶಲ್ಯಭಿವೃದ್ಧಿ ಇಲಾಖೆ ಕಾರ್ಮಿಕ ಇಲಾಖೆ ಮತ್ತು ಜಿಲ್ಲಾಡಳಿತ ಇವರುಗಳು ಸಂಯುಕ್ತಾಶ್ರಯದಲ್ಲಿ ಮತ್ತು ಕೇಂದ್ರ ಸರ್ಕಾರದ ರಾಷ್ಟ್ರೀಯ ವೃತ್ತಿ ಸೇವಾಯೋಜನೆ(NCSP) ಅಡಿಯಲ್ಲಿ ಉದ್ಯೋಗಮೇಳವನ್ನು ಏರ್ಪಡಿಸಲಾಗಿದೆ.

ಉದ್ಯೋಗ ಮೇಳ ಉದ್ಘಾಟನ ಕಾರ್ಯಕ್ರಮ

ಉದ್ಯೋಗ ಮೇಳದ ಕಾರ್ಯಕ್ರಮವನ್ನು ಕಾರ್ಮಿಕ ಸಚಿವ ಅರಬೈಲ್ ಶಿವರಾಂ ಹೆಬ್ಬಾರ್  ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಹಾಕರ ಸಚಿವರು ಹಾಗೂ ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಅವರು ಆಗಮಿಸಲಿದ್ದಾರೆ. ಶಾಸಕ ಎಸ್.ಎ.ರಾಮದಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

10 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ

ಕೊರೊನಾ ಮಹಾಮಾರಿ ಪ್ರಪಂಚದಾದ್ಯಂತ ತನ್ನ ಅಟ್ಟಹಾಸ ತೋರಿದ್ದ ಇದರಿಂದ ಲಕ್ಷಾಂತರ ಜನರ ಬದುಕು ಸಂಕಷ್ಟಕ್ಕೆ ಈಡಾಗಿದ್ದಾರೆ. ಕ್ಷೇತ್ರದ ಜನತೆಗೆ ಮತ್ತು ಮೈಸೂರು ಜಿಲ್ಲೆಯ ಜನತೆಗೆ ಅನುಕೂಲ ವಾಗುವಂತೆ ಉದ್ಯೋಗಮೇಳ ಏರ್ಪಡಿಸಿದ್ದು, ಉದ್ಯೋಗಮೇಳದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಇದಕ್ಕಾಗಿ ಅವಶ್ಯಕವಾಗಿರುವ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.

ಮೈಸೂರಿನ ಹಾಗೂ ನಂಜನಗೂಡಿನ ಸಣ್ಣ ಹಾಗೂ ಬೃಹತ್ ಕೈಗಾರಿಕ ಘಟಕಗಳು ಉದ್ಯೋಗಮೇಳದಲ್ಲಿ ಭಾಗವಹಿಸುತ್ತಿವೆ.  ಉದ್ಯೋಗ ಮೇಳದಲ್ಲಿ ಭಾಗವಹಿಸಲಿಚ್ಚಿಸುವ ಉದ್ಯೋಗಾಕಾಂಕ್ಷಿಗಳು ಅಂಕಪಟ್ಟಿಗಳ ಜೆರಾಕ್ಸ್, ಆಧಾರ್ ಕಾರ್ಡ್, ಸ್ವವಿವರದ ಪ್ರತಿಗಳನ್ನು ತರಬೇಕು ಸಂದರ್ಶನದ ವೇಳೆಗಿಂತ ಸ್ವಲ್ಪ ಮೊದಲೇ ಸ್ಥಳ ತಲುಪಿ ಎಂದು ಸೂಚಿಸಲಾಗಿದೆ.

ಉದ್ಯೋಗ ಮೇಳದಲ್ಲಿ ವಿದ್ಯಾರ್ಹತೆ, ಕೌಶಲ್ಯಾಧಾರಿತವಾಗಿ ಉದ್ಯೋಗ ಕಲ್ಪಿಸಲು ವೇದಿಕೆ ಸಲ್ಲಿಸುತಿದ್ದು ಮೈಸೂರು ಜಿಲ್ಲೆಯ  ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗವನ್ನು ಪಡೆಯಬೇಕೆಂದು ಶಾಸಕ ಎಸ್.ಎ.ರಾಮದಾಸ್ ರವರು ಮನವಿ ಮಾಡಿರುತ್ತಾರೆ.

ಉದ್ಯೋಗಮೇಳದಲ್ಲಿ ಭಾಗವಹಿಸುವ ಕಂಪನಿಗಳ ಮಾಹಿತಿ

ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಗಳಾದ ಎಕ್ಸೆಲ್ ಸಾಫ್ಟ್, ತಿಯರಮ್ಸ್, ದೊಡ್ಡ ಕೈಗಾರಿಕೋಧ್ಯಮಗಳ ಪೈಕಿ ಪ್ರಮುಖವಾಗಿ  ಬೆಮಲ್, ಜೆ.ಕೆ ಫ್ಯಾಕ್ಟರಿ, ರಾಣೆ ಮಡ್ರಾಸ್, ದುರ್ಗಾ ಸಲ್ಯೂಷನ್, ಗ್ರಾಸ್ ರೂಟ್ಸ್, ಆದಿತ್ಯಾ ಬಿರ್ಲಾ, ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ನಂಜನಗೂಡಿನ ಪ್ರತಿಷ್ಠಿತ ಕಂಪನಿಗಳಾದ ನೆಸ್ಲೆ, ಜುಬಿಲಿಯಂಟ್, (ಯು.ಬಿ)ಯುನೈಟೆಡ್ ಬ್ರಿವರೀಸ್, ಏಷಿಯನ್ ಪೈಂಟ್ಸ್, ರಂಗ ರಾವ್ ಅಂಡ್ ಸನ್ಸ್, ಎ.ಬಿ.ಬಿ ಇಂಡಿಯಾ ಲಿ., ವಿಕೆಸಿ, ಬಕಾರ್ಡಿ,  ಐ.ಟಿ.ಸಿ, ರಿತಿ.ಎಫ್.ಐ ಡಿ.ಸಿ ಸಲ್ಯೂಷನ್, ಬಿಲ್ಡರ್ಸ್ ಅಸೋಸಿಯೇಷನ್ ನ ಕ್ರೆಡಾಯ್ ಸಂಸ್ಥೆಯ ಜಿ.ಎಸ್.ಎಸ್. ಸಂಸ್ಥೆ, ಟ್ರೆಂಡ್ಞ್, ಫೌಂಡೇಷನ್ ಸಂಸ್ಥೆ, ಸೇಫ್ ವ್ಹೀಲ್ಸ್ ಗ್ರೂಪ್ ಆಫ್ ಕಂಪನೀಸ್ ಭಾಗವಹಿಸಲಿವೆ.

ಮೈಸೂರು ಫಾರ್ಮ ಫೋರಂ ವತಿಯಿಂದ ಸುಮಾರು 15 ಕಂಪನಿಗಳು, ಹೋಟೆಲ್ ಅಸೋಸಿಯೇಷನ್ ವತಿಯಿಂದ ರಾಡಿಸನ್ ಬ್ಲೂ, ಕಂಟ್ರಿ ಇನ್ ಸೂಟ್ಸ್, ಹೆರಿಟೇಜ್ ಹೋಟೆಲ್, ಹೋಟೆಲ್ ಡಾನ್, ವಿಷ್ಣು ಭವನ್ ಹಾಗೂ ಮೈಸೂರು ಶಾಲಾ ಅಸೋಸಿಯೇಷನ್ ವತಿಯಿಂದ ಮೈಸೂರಿನ ಪ್ರತಿಷ್ಠಿತ ಶಾಲೆಗಳಾದ ಶಾರದಾ ಪಬ್ಲಿಕ್ ಸ್ಕೂಲ್, ಪ್ರಗತಿ ಎಲೈಟ್ ಶಾಲೆ, ಮಾನಸ ಸರೋವರ ಪುಷ್ಕರಣಿ ಶಾಲೆ, ಸೈಂಟ್ ಥಾಮಸ್ ಎಜುಕೇಷನ್ ಸೊಸೈಟಿ ಯಿಂದ 14 ಶಾಲೆಗಳು , ಬೆಂಗಳೂರಿನಿಂದ ಸುಮಾರು 10ಕ್ಕೂ ಹೆಚ್ಚು ಕಂಪನಿಗಳು. ಬಿಪಿಒ, ಮ್ಯಾನುಫ್ಯಾಕ್ಚರಿಂಗ್, ಓಟ್ ಸೋರ್ಸ್, ಸೆಕ್ಯೂರಿಟಿ ಏಜನ್ಸಿಗಳು, ಗಾರ್ಮೆಂಟ್ಸ್, ಹೆಲ್ತ್ ಸೆಕ್ಟರ್ ಹೀಗೆ ಸುಮಾರು 100ಕ್ಕೂ ಹೆಚ್ಚು ಪ್ರತಿಷ್ಟಿತ ಕಂಪನಿಗಳು ವಿವಿಧ ಉದ್ಯೋಗಗಳ ನೇಮಕಾತಿಗಾಗಿ ಭಾಗವಹಿಸಲಿದ್ದಾರೆ.

ಉದ್ಯೋಗಕಾಂಕ್ಷಿಗಳ ಅರ್ಹತೆ19th-February-Dussehra-museum-exhibition-premises-Job fair

ಎಸ್ಎಸ್ಎಲ್ ಸಿ ಪಾಸು, ಫೇಲ್,  ಪಿಯುಸಿ, ಬಿ.ಎ. ಬಿಕಾಂ, ಬಿ.ಎಸ್.ಸಿ, ಎಂಕಾಂ. ಎಂ.ಎಸ್.ಸಿ, ಐ.ಟಿ.ಐ, ಡಿಪ್ಲೊಮಾ, ಜೆ.ಒ.ಸಿ, ಇಂಜಿನಿಯರಿಂಗ್, ಎಂ.ಟೆಕ್ , ಎಂಬಿಎ, ನರ್ಸಿಂಗ್…  ಹೀಗೆ ವಿವಿಧ ಕ್ಷೇತ್ರದ  ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಲಾಗಿದೆ.

key words : 19th-February-Dussehra-museum-exhibition-premises-Job fair