ಇಂಗ್ಲಿಷರ ನೆಲದಲ್ಲಿ ನಾಟ್‌ವೆಸ್ಟ್ ಸರಣಿ ಗೆದ್ದು ಸಂಭ್ರಮಿಸಿದ ನೆನಪು…

Promotion

ಬೆಂಗಳೂರು, ಜುಲೈ 14, 2020 (www.justkannada.in): ಭಾರತದ ನಾಟ್‌ವೆಸ್ಟ್ ಸರಣಿ ಗೆದ್ದು ಸಂಭ್ರಮಿಸಿ ಇಂದಿಗೆ 18 ವರ್ಷ ತುಂಬಿದೆ.

ಇಂಗ್ಲೆಂಡ್‌ ಲಾರ್ಡ್ಸ್‌ ಕ್ರಿಕೆಟ್‌ ಮೈದಾನದಲ್ಲಿ ಇದೇ ದಿನ 2002 ರಂದು ಭಾರತ ತಂಡದ ಸಂಭ್ರಮ ಮುಗಿಲು ಮುಟ್ಟಿತ್ತು. ಸೌರವ್ ಗಂಗೂಲಿ ನಾಯಕತ್ವದ ಟೀಮ್‌ ಇಂಡಿಯಾ ನಾಟ್‌ವೆಸ್ಟ್‌ ಸರಣಿಯ ಫೈನಲ್‌ ಹಣಾಹಣಿಯಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಅಂದು ದಾದಾ ತಮ್ಮ ಶರ್ಟ್‌ ಬಿಚ್ಚಿ ಸಂಭ್ರಮಿಸಿದ್ದರು.

ನಾಸೀರ್‌ ಹುಸೇನ್‌ ನಾಯಕತ್ವದ ಇಂಗ್ಲೆಂಡ್‌ ತಂಡ ನೀಡಿದ್ದ 326 ರನ್‌ ಗುರಿ ಹಿಂಬಾಲಿಸಿದ್ದ ಭಾರತ ಕೈಫ್ ಹಾಗೂ ಯುವರಾಜ್ ಸಿಂಗ್ 121 ರನ್ ಗಳ ಜೊತೆಯಾಟದಿಂದ ಭರ್ಜರಿ ಜಯ ಸಾಧಿಸಿತ್ತು.