ದೇಶದಲ್ಲಿ 16,103 ಮಂದಿಗೆ ಕೊರೊನಾ ಸೋಂಕು ದೃಢ

Promotion

ಬೆಂಗಳೂರು, ಜುಲೈ 03, 2022 (www.justkannada.in):  ದೇಶದಲ್ಲಿಕಳೆದ 24 ಗಂಟೆಯಲ್ಲಿ 16,103 ಮಂದಿಗೆಹೊಸದಾಗಿಕೊರೊನಾಸೋಂಕುದೃಢಪಟ್ಟಿದೆ.

ಈ ಮೂಲಕ ಇಂದು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕಳೆದ 24 ಗಂಟೆಯಲ್ಲಿ 16,103 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿನಿಂದ 31 ಮಂದಿ ಸಾವನ್ನಪ್ಪಿದ್ದಾರೆ.

ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳು 1,11,711 ಇದ್ದು, ದೈನಂದಿನ ಪಾಸಿಟಿವಿಟಿ ದರ ಶೇ.4.27ರಷ್ಟಿದೆ.