ಗುಜರಾತ್ ನ ಮೊರ್ಬಿಯಲ್ಲಿ ಕೇಬಲ್ ಸೇತುವೆ ಕುಸಿದು 141 ಮಂದಿ ಸಾವು: ಪ್ರಧಾನಿ ಮೋದಿ ಸಂತಾಪ.

ಗುಜರಾತ್,ಅಕ್ಟೋಬರ್,31,2022(www.justkannada.in):  ಗುಜರಾತ್‌ ನ ಮೊರ್ಬಿಯಲ್ಲಿ ಕೇಬಲ್ ಸೇತುವೆ ಕುಸಿದು 141 ಸಾವನ್ನಪ್ಪಿರುವ ಪ್ರಕರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಮಾತನಾಡಿರುವ ಪ್ರಧಾನಿ ಮೋದಿ, ನಿನ್ನೆಯಿಂದ ಗುಜರಾತ್ ಸರ್ಕಾರ ರಕ್ಷಣಾ ಕಾರ್ಯ ಮಾಡುತ್ತಿದೆ.  ಸೇನೆ ಎನ್ ಡಿ ಆರ್ ಎಫ್ ನಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ನಾವು ಗುಜರಾತ್ ಜನರ ಜೊತೆ ಇದ್ದೇವೆ.  ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಎಲ್ಲಾ ರೀತಿಯ ನೆರವು ನೀಡುತ್ತೇವೆ.  ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ  ಘಟನೆಯ ತನಿಖೆಗೂ ರಾಜ್ಯ ಸರ್ಕಾರ ಸಮಿತಿ ರಚಿಸಿದೆ ಎಂದು ತಿಳಿಸಿದರು.Rajiv Gandhi Health university- Founding Day-Prime Minister Modi -praises -Karnataka government

“ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ತ್ವರಿತವಾಗಿ ನಡೆಯುತ್ತಿವೆ ಮತ್ತು ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಅಹಮದಾಬಾದ್‌ನಿಂದ 200 ಕಿಮೀ ದೂರದಲ್ಲಿರುವ ತೂಗು ಸೇತುವೆ ನಿನ್ನೆ ಸಂಜೆ 6.42ಕ್ಕೆ ಕುಸಿದು ಬಿದ್ದಿದ್ದು, ಛಾತ್ ಪೂಜೆಗೆ ಸಂಬಂಧಿಸಿದಂತೆ ಕೆಲವು ಆಚರಣೆಗಳನ್ನು ಮಾಡಲು ಸುಮಾರು 500 ಜನರು ಅದರ ಮೇಲೆ ಜಮಾಯಿಸಿದ್ದ ವೇಳೆ ಈ ಘಟನೆ ನಡೆದಿತ್ತು.

Key words: 141 death-cable bridge- collapse –Gujarat-Prime Minister- Modi -condoles.