14 ಜಿಲ್ಲೆಗಳು ಅತಿವೃಷ್ಠಿ, ಪ್ರವಾಹಪೀಡಿತ: ಈವರೆಗೆ 73 ಮಂದಿ ಸಾವು: ಮಳೆಹಾನಿ ಬಗ್ಗೆ ಸಚಿವ ಆರ್.ಅಶೋಕ್ ಮಾಹಿತಿ.

Promotion

ಬೆಂಗಳೂರು,ಆಗಸ್ಟ್,8,2022(www.justkannada.in):  ರಾಜ್ಯದಲ್ಲಿ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ರಾಜ್ಯದ 14 ಜಿಲ್ಲೆಗಳು ಅತಿವೃಷ್ಟಿ ಪ್ರವಾಹಪೀಡಿತವಾಗಿದ್ದು, ಮಳೆಯಿಂದಾಗಿ 73 ಮಂದಿ ಸಾವನ್ನಪ್ಪಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದರು.

ಮಳೆಹಾನಿ ಕುರಿತು ಮಾತನಾಡಿದ ಸಚಿವ ಆರ್.ಅಶೋಕ್,  ಈಗಾಗಲೇ ಸಿಎಂ ಜಿಲ್ಲಾವಾರು ನಾಲ್ಕು  ಸಭೆ ನಡೆಸಿದ್ದಾರೆ. 161 ಗ್ರಾಮಗಳು ಪ್ರವಾಹ ಪೀಡಿತವಾಗಿವೆ.  21, 727 ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ರಾಜ್ಯದಲ್ಲಿ ಅತಿವೃಷ್ಠಿಯಿಂದ ಈವರೆಗೆ 73 ಜನರು ಸಾವನ್ನಪ್ಪಿದ್ದಾರೆ.  ಸಿಡಿಲು ಬಡಿದು 15 ಜನ, ಮರಬಿದ್ದು ಐವರು,  ಮನೆ ಕುಸಿದು 19 ಪ್ರವಾಹಕ್ಕೆ ಸಿಲುಕಿ 24 ಜನರು ಸಾವನ್ನಪ್ಪಿದರೆ ಭೂಕುಸಿತದಿಂದ 9, ವಿದ್ಯುತ್ ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಪ್ರವಾಹದಿಂದ 609 ಜಾನುವಾರುಗಳು ಸಾವನ್ನಪ್ಪಿದೆ ಎಂದರು.

ಕಾಳಜಿ ಕೇಂದ್ರದಿಂದ ಮನೆಗ ಹೋಗುವವರಿಗೆ ಕಾಳಜಿ ಕಿಟ್ ನೀಡಲಾಗುತ್ತದೆ. ಸಂಬಂಧಿಕರ ಮನೆಯಲ್ಲಿದ್ದರೂ ಕಾಳಜಿ ಕಿಟ್ ನೀಡುತ್ತೇವೆ.  ಕಾಳಜಿ ಕಿಟ್ ನಲ್ಲಿ 10 ಕೆಜಿ ಅಕ್ಕಿ, ಒಂದು ಕೆಜಿ ತೊಗರಿ, ಒಂದು ಕೆಜಿ ಉಪ್ಪು, ಸಕ್ಕರೆ, ಒಂದು ಲೀಟರ್ ಎಣ್ಣೆ ಒಟ್ಟು 11 ಪದಾರ್ಥಗಳಿರುವ ಕಾಳಜಿ ಕಿಟ್ ವಿತರಿಸುತ್ತೇವೆ ಎಂದರು.

ಮಳೆಯಿಂದ  ಮನೆ ಪೂರ್ಣ ಹಾನಿಯಾಗಿದ್ದರೆ 5 ಲಕ್ಷ ರೂ. ಭಾಗಶಃ ಮನೆಹಾನಿಯಾಗಿದ್ದರೇ 50 ಸಾವಿರ ಪರಿಹಾರ ನೀಡಲಾಗುತ್ತದೆ ಎಂದು  ಸಚಿವ ಆರ್.ಅಶೋಕ್ ತಿಳಿಸಿದರು.

Key words: 14 districts – heavy- rains- floods-Minister- R. Ashok

ENGLISH SUMMARY..

Heavy downpour in 14 districts: 73 people dead – Revenue Minister R. Ashoka provides information of rain havoc
Bengaluru, August 8, 2022 (www.justkannada.in): “The State has incurred huge loss due heavy down pour in the last few days. 14 districts have witnessed heavy rains and 17 people have died,” informed Revenue Minister R. Ashoka.
In a meeting held in Bengaluru today, the Minister R. Ashoka informed, “the CM has already conducted four meetings. 16 villages have been flooded, displacing 21,727 people. Till now 73 people have lost their lives. While 15 of them died due to lightening, five have died in tree accident, and 19 lost their lives in house collapses and 24 due to floods. Nine of them lost their lives in landslides and one person lost his life in electricity accident. 609 livestock have lost their lives.”
“Kaalaji kits (kits with essential goods) are being distributed to the needy. The kit comprises 11 essential goods including 10 kg rice, 1 kg toor dal, 1 kg salt, 1 kg sugar, 1 ltr edible oil. A sum of Rs. 5 lakh will be provided to those whose houses have been completely damaged and Rs.50,000 for those whose houses are partially damaged,” he informed.
Keywords: Revenue Minister R. Ashoka/ rain havoc/ information