125 ಕೋಟಿ ರೂ. ಇನ್ಸೆಂಟಿವ್ ಹೆಚ್ಚುವರಿ ಹಣ ಬಿಡುಗಡೆಗೆ ಒಪ್ಪಿಗೆ: ವೈದ್ಯರ ಪ್ರತಿಭಟನೆ ಅಂತ್ಯ- ಆರೋಗ್ಯ ಸಚಿವ ಶ್ರೀರಾಮುಲು ..

Promotion

ಬೆಂಗಳೂರು,ಸೆಪ್ಟಂಬರ್,18,2020(www.justkannada.in):  125 ಕೋಟಿ ರೂ. ಇನ್ಸೆಂಟಿವ್ ಹೆಚ್ಚುವರಿ ಹಣ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ಹೀಗಾಗಿ ವೈದ್ಯರ ಪ್ರತಿಭಟನೆ ಅಂತ್ಯವಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.jk-logo-justkannada-logo

ಸರಕಾರಿ ವೈದ್ಯಾಧಿಕಾರಿಗಳ ವೇತನ ಪರಿಷ್ಕರಣೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ವೈದ್ಯಾಧಿಕಾರಿಗಳ ಸಂಘ ವತಿಯಿಂದ  ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ಸಂಬಂಧ ವೈದ್ಯಾಧಿಕಾರಿಗಳ ಸಂಘದ ಜತೆ ಆರೋಗ್ಯ ಸಚಿವ ಶ್ರೀರಾಮುಲು ಇಂದು ಸಭೆ ನಡೆಸಿ ಚರ್ಚಿಸಿದರು.125-crores-incentive-agreed-release-minister-sriramulu

ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯರ ಪ್ರತಿಭಟನೆ ಅಂತ್ಯವಾಗಿದೆ. 125 ಕೋಟಿ ರೂ. ಇನ್ಸೆಂಟಿವ್ ಹೆಚ್ಚುವರಿ ಹಣ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಯಿಂದಲೇ ಹಣ ಬಿಡುಗಡೆಗೆ ಹಣಕಾಸು ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಕೋವಿಡ್ ಚಿಕಿತ್ಸೆಗೆ ಇನ್ನು ಯಾವುದೇ ಅಡಚಣೆ ಇರುವುದಿಲ್ಲ. ಇಂದಿನಿಂದ ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

Key words: 125 crores- Incentive- agreed -release -Minister -Sriramulu.