ದೇಶದಲ್ಲಿ ಮತ್ತೆ 11,739 ಹೊಸ ಕೋವಿಡ್ ಪ್ರಕರಣ ದೃಢ

Promotion

ಬೆಂಗಳೂರು, ಜೂನ್ 26, 2022 (www.justkannada.in): ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 11,739 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಇದರೊಂದಿಗೆ ಸೋಂಕಿತರ ಸಂಖ್ಯೆ 4,33,89,973ಕ್ಕೆ ಏರಿಕೆಯಾಗಿದೆ. ಆ ಪೈಕಿ 5,24,999 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಬುಲೆಟಿನ್ ತಿಳಿಸಿದೆ.

ಸದ್ಯ ದೇಶದಲ್ಲಿ 92,576 ಸಕ್ರಿಯ ಪ್ರಕರಣಗಳಿದ್ದು, ದೈನಂದಿನ ಪಾಸಿಟಿವಿಟಿ ದರ ಶೇ 2.59 ರಷ್ಟಿದೆ. ಮಹಾರಾಷ್ಟ್ರದಲ್ಲಿ 24,333, ಕೇರಳದಲ್ಲಿ 27,891, ತಮಿಳುನಾಡಿನಲ್ಲಿ 6,677, ಕರ್ನಾಟಕದಲ್ಲಿ 4,822 ಸಕ್ರಿಯ ಪ್ರಕರಣಗಳಿವೆ.

ಶನಿವಾರಕ್ಕೆ ಹೋಲಿಸಿದರೆ ಹೊಸ ಪ್ರಕರಣಗಳ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಶನಿವಾರದಂದು 15,940 ಪ್ರಕರಣಗಳು ದೃಢಪಟ್ಟಿದ್ದವು.