ಬಿಎಸ್ ವೈ ಅವಧಿಯಲ್ಲಿ ನೇಮಕಗೊಂಡಿದ್ಧ 10 ಹುದ್ದೆಗಳು ರದ್ಧು.

Promotion

ಬೆಂಗಳೂರು,ಆಗಸ್ಟ್,3,2021(www.justkannada.in):  ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ಇದ್ದ ರಾಜಕೀಯ ಕಾರ್ಯದರ್ಶಿಗಳು,ಮಾಧ್ಯಮ ಸಲಹೆಗಾರರು, ಕಾನೂನು ಸಲಹೆಗಾರರು ಸೇವೆಯಿಂದ ಬಿಡುಗಡೆ ಮಾಡಲಾಗಿದೆ.

ಬಿಎಸ್ ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ಧ 10 ಹುದ್ದೆಗಳನ್ನ ರದ್ಧು ಮಾಡಲಾಗಿದೆ. ಸಿಎಂ ರಾಜಕೀಯ ಕಾರ್ಯದರ್ಶಿಗಳಾಗಿದ್ದ ಎಂ.ಪಿ ರೇಣುಕಾಚಾರ್ಯ, ಡಿಎನ್ ದೇವರಾಜ್,ಎನ್ ಆರ್ ಸಂತೋಷ್, ಮಾಧ್ಯಮ ಸಲಹೆಗಾರರಾಗಿದ್ದ ಎನ್.ಬೃಂಗೇಶ್, ಕಾನೂನು ಸಲಹೆಗಾರ ಮೋಹನ್ ಲಿಂಬೆಕಾಯಿ,  ನೀತಿನಿರೂಪಣೆ ಸಲಹೆಗಾರರು, ದೆಹಲಿ ಪ್ರತಿನಿಧಿ,ಆಡಳಿತ ಸಲಹೆಗಾರರನ್ನ ಸೇವೆಯಿಂದ ಬಿಡುಗಡೆ ಗೊಳಿಸಲಾಗಿದೆ.

ಬಿಎಸ್ ವೈ ಅವಧಿಯಲ್ಲಿನ 10 ಹುದ್ಧೆಗಳನ್ನ ರದ್ಧುಗೊಳಿಸಿ ಡಿಪಿಎಆರ್ ಅಧಿಸೂಚನೆ ಹೊರಡಿಸಿದೆ ಎನ್ನಲಾಗಿದೆ. ರಾಜ್ಯದ ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ ಬೊಮ್ಮಾಯಿ ಇದೀಗ ಹೊಸ ಸಚಿವ ಸಂಪುಟ ರಚನೆಗಾಗಿ ಚರ್ಚಿಸಲು ದೆಹಲಿಗೆ ತೆರಳಿದ್ದಾರೆ.

Key words:  10 posts cancel- vacated- during- BS yeddyurappa- CM