ವಿಧಾನಸೌಧದಲ್ಲಿ10 ಲಕ್ಷ ಹಣ ಪತ್ತೆ ಪ್ರಕರಣ:  ಜಗದೀಶ್ ಹೇಳಿಕೆ ಪ್ರತಿ ಹರಿದು ಹಾಕಿ ಜೈಲಿಗೆ ತಳ್ಳಿದ್ದಾರೆ- ಹೆಚ್.ಡಿಕೆ ಆರೋಪ.

Promotion

ಬೀದರ್,ಜನವರಿ,6,2022(www.justkannada.in): ವಿಧಾನಸೌಧದಲ್ಲಿ10 ಲಕ್ಷ ರೂ. ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದಿರುವ ಸಹಾಯಕ ಇಂಜಿನಿಯರ್  ಜಗದೀಶ್ ಹೇಳಿಕೆ ಪ್ರತಿಯನ್ನು ಅಧಿಕಾರಿಗಳು ಹರಿದು ಹಾಕಿ ಜೈಲಿಗೆ ತಳ್ಳಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಬೀದರ್ ನಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಅವನು ಪೊಲೀಸರ ಬಳಿ ಏನು ಹೇಳಿಕೆ ಕೊಟ್ಟಿದ್ದಾನೆ ಅನ್ನೋದು ಗೊತ್ತು  10 ಲಕ್ಷದ ಬಗ್ಗೆ ಅವನು ಪೊಲೀಸರ ಬಳಿ ಬಾಯಿ ಬಿಟ್ಟಿದ್ದಾನೆ. ಅವನ ಹೇಳಿಕೆಯಿಂದ ಮಂತ್ರಿಗಳ ಕುತ್ತಿಗೆಗೆ ಬರುತ್ತೆ ಎಂದರು.

ಜಗದೀಶ್  ಹೇಳಿಕೆಯ ಪ್ರತಿಯನ್ನ ಅಧಿಕಾರಿಗಳು  ಹರಿದು ಹಾಕಿ ಜೈಲಿಗೆ ತಳ್ಳಿದ್ದಾರೆ. ಮೂರ್ನಾಲ್ಕು ದಿನವಾದ ಮೇಲೆ  ಆತ ಜೈಲಿನಿಂದ ರಿಲೀಸ್  ಆಗುತ್ತಾನೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

Key words: 10 lakh- money – Vidhansouda- Allegation –Former CM-H.D.Kumaraswamy