ಪಿಇಎಸ್ ಕಾಲೇಜಿನ ಪದವೀಧರನಿಗೆ ಕ್ಯಾಂಪಸ್ ಪ್ಲೇಸ್‌ಮೆಂಟ್‌ ನಲ್ಲಿ ರೂ.1.5 ಕೋಟಿಯ ಉದ್ಯೋಗಾವಕಾಶ..!

Promotion

ಬೆಂಗಳೂರು, ಜುಲೈ 12, 2021(www.justkannada.in): ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಯುಎಸ್ ಮೂಲದ ಕಾನ್‌ ಫ್ಲೂಯೆಂಟ್ ಕಂಪನಿಯಿಂದ ಬೃಹತ್ ಸಂಬಳದ ಉದ್ಯೋಗಾವಕಾಶವನ್ನು ಪಡೆದುಕೊಂಡಿದ್ದಾರೆ.jk

ಸಾರಂಗ್ ರವೀಂದ್ರನ್ (22) ಎಂಬ ಹೆಸರಿನ ಕಂಪ್ಯೂಟರ್ ಸೈನ್ಸ್ ತಂತ್ರಜ್ಞಾನ ಇಂಜಿನಿಯರಿಂಗ್ ಪದವೀದರನಿಗೆ ಸಿಟಿಸಿ ರೂ.1.5 ಕೋಟಿಯ ಉದ್ಯೋಗ ಲಭಿಸಿದೆ.

ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕುಟುಂಬಕ್ಕೆ ಸೇರಿರುವ ಸಾರಂಗ್ ಹಾಗೂ ಆತನ ಹಿರಿಯ ಸಹೋದರನಿಗೆ ಸಾಫ್ಟ್ ವೇರ್  ಡೆವೆಲಪ್‌ ಮೆಂಟ್‌ನಲ್ಲಿ ಅತೀವ ಆಸಕ್ತಿಯಿತ್ತು. ಸಾರಂಗ್ ಅತ್ಯುತ್ತಮ ಅಂಕಗಳೊಂದಿಗೆ ಇಂಜಿನಿಯರಿಂಗ್ ಪದವಿಯಲ್ಲಿ ಉತ್ತೀರ್ಣರಾದರೂ ಸಹ ಈ ಬೃಹತ್ ಸಂಬಳದ ಉದ್ಯೋಗಾವಕಾಶ ಆತನಿಗೆ, ಆತನ ಕುಟುಂಬಸ್ಥರು ಹಾಗೂ ಪಿಇಎಸ್ ವಿಶ್ವವಿದ್ಯಾಲಯದ ನಿರ್ವಹಣಾ ಮಂಡಳಿಗೆ ಆಶ್ಚರ್ಯವನ್ನು ಉಂಟು ಮಾಡಿದೆಯಂತೆ.

ಈ ಕುರಿತು ಮಾತನಾಡಿರುವ ಸಾರಂಗ್ ಮೊದಲ ನಾಲ್ಕು ತಿಂಗಳು ನನಗೆ ಯಾವುದೇ ಉದ್ಯೋಗಾವಕಾಶ ದೊರೆಯಲಿಲ್ಲ. “ನವೆಂಬರ್ ತಿಂಗಳಲ್ಲಿ ನನಗೆ ಮೊದಲ ಆಫರ್ ಬಂತು, ನಾನು ಇಂಟರ್ನ್ ಮಾಡುತ್ತಿದ್ದಂತಹ ಕಂಪನಿಗೆ ಆ ಕುರಿತು ಮಾಹಿತಿ ನೀಡಿದೆ. ಆಗ ಕಂಪನಿ ಕೂಡಲೇ ಸಂದರ್ಶನವನ್ನು ಏರ್ಪಡಿಸಿ ಕೂಡಲೇ ನನ್ನ ಸೇವೆಗಳನ್ನು ಪಡೆಯಲು ತೀರ್ಮಾನಿಸಿತು,” ಎನ್ನುತ್ತಾರೆ ಸಾರಂಗ್. ಸಾರಂಗ್ ಇದೇ ತಿಂಗಳು ಲಂಡನ್‌ ನಲ್ಲಿರುವ ಕಾನ್‌ ಫ್ಲೂಯೆಂಟ್‌ನ ಕಚೇರಿಯಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾಗಲಿದ್ದಾರೆ.

ಸಾರಂಗ್, ಕುಮಾರನ್ಸ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿ, ಜಯನಗರದ ಆರ್.ವಿ. ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಉದ್ಯೋಗಾವಕಾಶಗಳ ಅನುಭವವನ್ನು ಹಂಚಿಕೊಂಡಿರುವ ಸಾರಂಗ್ ಅವರ ಪ್ರಕಾರ ಆನ್‌ಲೈನ್ ಉದ್ಯೋಗಾವಕಾಶಗಳು ಬಹಳ ಕಷ್ಟಕರವಾಗಿದ್ದವು. “ಸಂದರ್ಶನಗಳನ್ನು ಆನ್‌ಲೈನ್ ಮೂಲಕ ನಡೆಸಲಾಗುತಿತ್ತು, ಪ್ಲೇಸ್‌ ಮೆಂಟ್‌ಗಾಗಿ ಅನೇಕರು ಪ್ರಯತ್ನಿಸುತ್ತಿದ್ದರು. ಭೌತಿಕ ಸಂದರ್ಶನದ ಹೋಲಿಕೆಯಲ್ಲಿ ಕ್ಯಾಮೆರಾ ನೋಡಿಕೊಂಡು ಪ್ಯಾನೆಲ್ ಸದಸ್ಯರ ಜೊತೆ ಸಂವಹನ ನಡೆಸುವುದು ನಿಜಕ್ಕೂ ಕಷ್ಟವೇ.”

ಕಲಿಕೆಯಲ್ಲಿ ಅತ್ಯುನ್ನತ ಶ್ರೇಣಿಯನ್ನು ಪಡೆದಿರುವುದರ ಜೊತೆಗೆ ಸಾರಂಗ್ ತಬಲಾ ವಾದಕರೂ ಹೌದಂತೆ! “ನಾನು ಒಂದು ವೇಳೆ ಸಾಫ್ಟ್ ವೇರ್ ಇಂಜಿನಿಯರ್ ಆಗಿರದಿದ್ದರೆ ತಬಲಾ ಕಲಾವಿದನಾಗುತ್ತಿದ್ದೆ. ನನ್ನ ಅಜ್ಜಿಯೂ ಸಹ ಶಾಸ್ತ್ರೀಯ ಸಂಗೀತ ಕಲಾವಿದೆಯಾಗಿದ್ದು ಆಲ್ ಇಂಡಿಯಾ ರೇಡಿಯೊದಲ್ಲಿ ಕಲಾವಿದೆಯಾಗಿದ್ದರು,” ಎನ್ನುತ್ತಾರೆ ಹೆಮ್ಮೆಯಿಂದ ಬೀಗುತ್ತಿರುವ ಸಾರಂಗ್.

ಕೋವಿಡ್ ಸಾಂಕ್ರಾಮಿಕದ ನಡುವೆಯೂ ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಲವಾರು ಕಂಪನಿಗಳಲ್ಲಿ ಇಂಟರ್ನ್ ಶಿಪ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪಿಇಎಸ್‌ನ ವಿವಿಧ ಕ್ಯಾಂಪಸ್‌ಗಳಲ್ಲಿ ಸುಮಾರು ೧,೨೮೩ ವಿದ್ಯಾರ್ಥಿಗಳು ಈ ಸಾಂಕ್ರಾಮಿಕದ ವರ್ಷದಲ್ಲಿ ವರ್ಚುವಲ್ ಇಂಟರ್ನ್ಷಿಪ್‌ಗಳನ್ನು ಪಡೆದುಕೊಂಡಿದ್ದು, ರೂ.೧೫,೦೦೦ ದಿಂದ ರೂ.೮೭,೦೦೦ದವರೆಗೆ ಸ್ಟೆಪೆಂಡ್‌ಗಳನ್ನು (ಶಿಷ್ಯವೇತನ) ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪೈಕಿ ಅತೀ ಹೆಚ್ಚಿನ ಸ್ಟೆಪೆಂಡ್ ತಿಂಗಳಿಗೆ ರೂ.೧.೨೫ ಲಕ್ಷವಂತೆ! “ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಆರ್. ದೊರೆಸ್ವಾಮಿ ಅವರು, “ವಿವಿಧ ಇಂಜಿನಿಯರಿAಗ್ ಕೋರ್ಸುಗಳ ಒಟ್ಟು ೧,೫೫೭ ಅರ್ಹ ವಿದ್ಯಾರ್ಥಿಗಳ ಪೈಕಿ ೧,೩೭೭ ವಿದ್ಯಾರ್ಥಿಗಳು, ವ್ಯವಹಾರ ನಿರ್ವಹಣಾ ವಿಭಾಗದಿಂದ ೧೬೫ ಹಾಗೂ ವಾಣಿಜ್ಯ ವಿಭಾಗದಿಂದ ೧೦೨ ಮತ್ತು ಫಾರ್ಮಸಿ ವಿಭಾಗದಿಂದ ೯೬ ವಿದ್ಯಾರ್ಥಿಗಳು ಉದ್ಯೋಗಾವಕಾಶಗಳನ್ನು ಪಡೆದಿದ್ದಾರೆ,” ಎಂದು ಹೆಮ್ಮೆಯಿಂದ ನುಡಿಯುತ್ತಾರೆ.”

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: 1.5 crore -job offer – campus- placement – PES college- graduate.