ವಿಶ್ವದಲ್ಲಿನ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1.28 ಕೋಟಿ !

Promotion

ವಾಷಿಂಗ್ಟನ್, ಜುಲೈ 12, 2020 (www.justkannada.in): ಜಾಗತಿಕ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಭಾನುವಾರ 1 ಕೋಟಿ 28 ಲಕ್ಷ ತಲುಪಿದ್ದರೆ, ಸಾವಿನ ಸಂಖ್ಯೆ 5 ಲಕ್ಷದ 67 ಸಾವಿರಕ್ಕಿಂತ ಹೆಚ್ಚಾಗಿದೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಮಾಹಿತಿಯಂತೆ ಜಾಗತಿಕ ಒಟ್ಟು ಪ್ರಕರಣಗಳ ಸಂಖ್ಯೆ 12,847,2932ರಷ್ಟಿದ್ದರೆ, ಸಾವಿನ ಸಂಖ್ಯೆ 567,734ಕ್ಕೆ ಏರಿದೆ ಎಂದು ವಿಶ್ವವಿದ್ಯಾಲಯದ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ) ತನ್ನ ಇತ್ತೀಚಿನ ನವೀಕೃತ ಮಾಹಿತಿಯಲ್ಲಿ ತಿಳಿಸಿದೆ.

ವಿಶ್ವದಲ್ಲಿ ಅತಿ ಹೆಚ್ಚು ಸೋಂಕುಗಳು ಮತ್ತು ಸಾವುಗಳು ಅಮೆರಿಕದಲ್ಲಿ ವರದಿಯಾಗಿದ್ದು ಇವು ಕ್ರಮವಾಗಿ 32,45,158 ಹಾಗೂ 1,34,764 ರಷ್ಟಿವೆ.