ಕೊರೋನಾ ಬಾಧಿತ ವಲಯಗಳಿಗೆ  1.1 ಲಕ್ಷ ಕೋಟಿ ರೂ ಪ್ಯಾಕೇಜ್ : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ.

Promotion

ನವದೆಹಲಿ,ಜೂನ್,28,2021(www.justkannada.in) ದೇಶದಲ್ಲಿ ಇತ್ತೀಚೆಗೆ ಕೊರೋನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದು ಈ ಮಧ್ಯೆ ಕೊರೋನಾ ಬಾಧಿತ ವಲಯಗಳಿಗೆ ಕೇಂದ್ರ ಸರ್ಕಾರ  1.1 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದೆ.jk

ಈ ಸಂಬಂಧ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೊರೋನಾ ಬಾಧಿತ ವಲಯಗಳಿಗೆ  1.1  ಲಕ್ಷ ಕೋಟಿ ರೂ,  ವೈದ್ಯಕೀಯ ಮೂಲಸೌಕರ್ಯಕ್ಕೆ 50 ಸಾವಿರ ಕೋಟಿ ರೂ. ಉಳಿದ ವಲಯಗಳಿಗೆ 60 ಸಾವಿರ ಕೋಟಿ ಅನುದಾನ ನೀಡಲಾಗುತ್ತದೆ ಎಂದು ತಿಳಿಸಿದರು.

1.5 ಲಕ್ಷ ಕೋಟಿ ರೂ. ತುರ್ತು ಕ್ರೆಡಿಟ್ ಲಿಂಕಿಂಗ್ ಸ್ಕೀಮ್ ಜಾರಿ ಮಾಡಲಾಗುತ್ತದೆ. ತುರ್ತು ಕ್ರೆಡಿಟ್ ಲಿಂಕಿಂಗ್ ಸ್ಕೀಮ್ ಗೆ ಒಟ್ಟು 4.5 ಕೋಟಿ ಸಿಗಲಿದೆ. ಶೇ.7.95ರ ಬಡ್ಡಿದರದಲ್ಲಿ ಆರೋಗ್ಯ ಸೌಕರ್ಯಕ್ಕೆ ಸಾಲ ನೀಡಲಾಗುತ್ತದೆ.  8 ಮಹಾನಗರ ಹೊರತುಪಡಿಸಿ ಉಳಿದೆಡೆ ಸಾಲ ನೀಡಲಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಕಳೆದ ವರ್ಷದ ಸ್ಕೀಮ್ ಗೆ ಹೆಚ್ಚುವರಿ ಅನುದಾನ ಘೋಷಣೆ ಮಾಡಲಾಗಿದೆ.   25 ಲಕ್ಷ ಜನರಿಗೆ ಮೈಕ್ರೋ ಫೈನಾನ್ಸ್ ಮೂಲಕ ಸಾಲ ನೀಡಿಕೆ. ಎನ್ ಬಿಎಫ್ ಸಿ, ಎಂಎಫ್ ಐ ಮೂಲಕ ತಲಾ 1.25 . ಲಕ್ಷದವರೆಗೆ ಸಾಲ ನೀಡಲು ನಿರ್ಧರಿಸಲಾಗಿದೆ.  3 ವರ್ಷದೊಳಗೆ ಸಾಲ ಮರುಪಾವತಿಗೆ ಅವಕಾಶ ನೀಡಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಪ್ರವಾಸೋದ್ಯಮಕ್ಕೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್‌

ಇನ್ನು ಪ್ರವಾಸೋದ್ಯಮಕ್ಕೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್‌ ನೀಡಿದೆ, ಈ ಬಗ್ಗೆ ಮಾಹಿತಿ ನೀಡಿದ ನಿರ್ಮಲಾ ಸೀತಾರಾಮನ್,  ಟೂರಿಸ್ಟ್ ಏಜನ್ಸಿಯವರಿಗೆ 10 ಲಕ್ಷದವರೆಗೆ ಸಾಲ ನೀಡಲು ನಿರ್ಧಾರ ಮಾಡಲಾಗಿದೆ.  ರಾಜ್ಯಮಟ್ಟದಲ್ಲಿ ನೋಂದಾಯಿತ 11 ಸಾವಿರ ಟೂರಿಸ್ಟ್ ಗೈಡ್ ಗಳಿಗೆ ನೆರವು ನೀಡಲಾಗುತ್ತದೆ. ಟೂರಿಸ್ಟ್ ಗೈಡ್ ಗಳಿಗೆ 1 ಲಕ್ಷದವರೆಗೆ ಸಾಲ ನೀಡಲು ತೀರ್ಮಾನಿಸಲಾಗಿದ್ದು, ಪ್ರವಾಸೋದ್ಯಮ ಇಲಾಖೆ ಮೂಲಕ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಪ್ರವಾಸಿಗರಿಗೆ ಉಚಿತ ವೀಸಾ ನೀಡಲು ನಿರ್ಧಾರ ಮಾಡಲಾಗಿದೆ.   ಮೊದಲು 5 ಲಕ್ಷ ಪ್ರವಾಸಿ ವೀಸಾ ನೀಡುತ್ತೇವೆ ಎಂದು ಮಾಹಿತಿ ನೀಡಿದ ನಿರ್ಮಲಾ ಸೀತಾರಾಮನ್,  ಆತ್ಮ ನಿರ್ಭರ ಭಾರತ್ ರೋಜಗಾರ್ ಯೋಜನೆ ವಿಸ್ತರಣೆ ಮಾಡುತ್ತೇವೆ.   15 ಸಾವಿರಕ್ಕಿಂತ ಕಡಿಮೆ ವೇತನದಾರರ ಪಿಎಫ್ ಪಾವತಿಸುತ್ತೇವೆ.  ಈ ಯೋಜನೆ 2022 ಮಾರ್ಚ್ 31ರವರೆಗೂ ವಿಸ್ತರಣೆಯಾಗಲಿದೆ ಎಂದು ತಿಳಿಸಿದರು.

Key words: 1.1 lakh- crores- package – Corona Affected Zones- Announced – Union Finance Minister- Nirmala Sitharaman.