ಸಿದ್ಧರಾಮಯ್ಯಗೆ ಉತ್ತರಿಸಿದರೇ ಕೊಚ್ಚೆ ಮೇಲೆ ಕಲ್ಲು ಎಸೆದಂತೆ- ಬಿ.ಎಲ್ ಸಂತೋಷ್ ವಾಗ್ದಾಳಿ.

Promotion

ಉಡುಪಿ,ಡಿಸೆಂಬರ್,15,2021(www.justkannada.in): ಸಿದ್ಧರಾಮಯ್ಯ ಸಂಘವನ್ನು, ಆರ್​ಎಸ್​ಎಸ್​ ಅನ್ನು ಪುಂಖಾನುಪುಂಖವಾಗಿ ಬೈಯುತ್ತ ಓಡಾಡಿದರು. ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ಸಂದರ್ಭ ಬದುಕಿಗೆ ಬೆಂಕಿ ಬಿದ್ದಂತೆ ಆಡಿದರು. ಸಿದ್ದರಾಮಯ್ಯ ಈಗಾಗಲೇ ಕಸದಬುಟ್ಟಿಯಲ್ಲಿ ಇದ್ದಾರೆ. ಸಿದ್ಧರಾಮಯ್ಯಗೆ ಉತ್ತರಿಸಿದರೇ ಕೊಚ್ಚೆ ಮೇಲೆ ಕಲ್ಲು ಎಸೆದಂತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಾಗ್ದಾಳಿ ನಡೆಸಿದರು.

ಇಂದು ಮಾತನಾಡಿದ ಬಿ.ಎಲ್ ಸಂತೋಷ್, ಜನ ಬಿಜೆಪಿಗೆ ಮತ ಕೊಟ್ಟಿದ್ದು ಅಭಿವೃದ್ಧಿ ವಿಚಾರಕ್ಕೆ. ಪ್ರತಿ ಸಂದರ್ಭದಲ್ಲೂ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆಗೆ ಉತ್ತರಿಸಬೇಕಾಗಿಲ್ಲ. ದೇಶಕ್ಕೋಸ್ಕರ ಬಿಜೆಪಿಯಲ್ಲಿ ಯಾರು ಬಲಿದಾನ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಕೇಳುತ್ತಾರೆ. ಈ ಸಾಲಿನಲ್ಲಿ ಬರುವ ಮೊದಲನೆ ಹೆಸರು ಶಾಮ್ ಪ್ರಸಾದ್ ಮುಖರ್ಜಿ.ಸಿದ್ದರಾಮಯ್ಯ ಅವರ ನಾಲಿಗೆಗೆ ಲಂಗು ಇಲ್ಲ, ಲಗಾಮು ಇಲ್ಲ, ಸಂಸ್ಕಾರವೂ ಇಲ್ಲ. ಮೂರು ಇಲ್ಲದೆ ಇರುವುದರಿಂದ ಈ ಪ್ರಶ್ನೆಯನ್ನು ಹಾದಿಬೀದಿಯಲ್ಲಿ ಕೇಳುತ್ತಿರುತ್ತಾರೆ. ಶಾಂತವಾಗಿ ಮನೆಯಲ್ಲಿ ಕುಳಿತುಕೊಂಡು ಶಾಮ್​ ಪ್ರಸಾದ ಮುಖರ್ಜಿ ಯಾರು ಎಂದು ಓದಲಿ ಎಂದು ಟಾಂಗ್ ನೀಡಿದರು.

ಆತ್ಮಸಾಕ್ಷಿಯನ್ನು ಭಗವಂತ ಎಲ್ಲರಿಗೂ ಕೊಟ್ಟಿದ್ದಾನೆ. ಆದರೆ ಆತ್ಮಸಾಕ್ಷಿಯನ್ನು ಕೆಲವರು ಕೊಂದು ಹಾಕುತ್ತಾರೆ. ಅದರಲ್ಲಿ ನಮ್ಮ ವಿರೋಧ ಪಕ್ಷದ ನಾಯಕರೂ ಕೆಲವರಿದ್ದಾರೆ ಎಂದು ಬಿ.ಎಲ್ ಸಂತೋಷ್  ತಿಳಿಸಿದರು.

Key words: former CM- Siddaramaiah -answer – throwing stones – puddle-BL Santosh