ಶಾಸಕ ಎಸ್.ಆರ್ ವಿಶ್ವನಾಥ್ ಕೊಲೆಗೆ ಸಂಚು ಆರೋಪ: ಕುಳ್ಳದೇವರಾಜ್ ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ.

Promotion

ಬೆಂಗಳೂರು,ಡಿಸೆಂಬರ್,2,2021(www.justkannada.in): ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಹತ್ಯೆಗೆ ಸ್ಕೇಚ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು ಪ್ರಕರಣ ಸಂಬಂಧ ಆರೋಪಿ ಕುಳ್ಳ ದೇವರಾಜ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಾಸಕ ಎಸ್.ಆರ್ ವಿಶ್ವನಾಥ್ ಕೊಲೆಗೆ ಸಂಚು ಮಾಡಿದ ವಿಡಿಯೋ ಬಹಿರಂಗವಾದ ಬೆನ್ನಲ್ಲೆ ಶಾಸಕ ಎಸ್.ಆರ್ ವಿಶ್ವನಾಥ್ ದೂರು ನೀಡಿದ್ದರು. ಇದೀಗ ಕೋರ್ಟ್ ಅನುಮತಿ ಪಡೆದು ಎಫ್ ಐಆರ್ ದಾಖಲಾಗಿದೆ. ಈ ಸಂಬಂಧ ಆರೋಪಿ ಗೋಪಾಲಕೃಷ್ಣ ಹಾಗೂ ಕುಳ್ಳದೇವರಾಜ್, ಸಹಚರರಿಗೆ ವಿಚಾರಣೆಗೆ ಹಾಜರಾಗುವಂತೆ ರಾಜಾನುಕುಂಟೆ ಪೊಲೀಸರು ನೊಟೀಸ್ ನೀಡಿದ್ದರು.

ಇದೀಗ ಕುಳ್ಳದೇವರಾಜ್ ನನ್ನ ರಾಜಾನುಕುಂಟೆ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Key words: MLA- SR Viswanath – murder- Sketch- Kuladevaraj- arrested