ರಾಮನಗರ ಹೆಸರು ಬದಲಾವಣೆ ವಿಚಾರ: ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ಅಶ್ವಥ್ ನಾರಾಯಣ್ ವಾಗ್ದಾಳಿ.

Promotion

ಬೆಂಗಳೂರು,ಅಕ್ಟೋಬರ್,27,2023(www.justkannada.in): ರಾಮನಗರ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.

ಹೆಸರು ಬದಲಾವಣೆಯ ವೀರ ಅಂದರೆ ಅದು ಡಿ.ಕೆ.ಶಿವಕುಮಾರ್​ ಎಂದು ಎಂದು ಶಾಸಕ ಅಶ್ವತ್ಥ್ ನಾರಾಯಣ್ ಕಿಡಿಕಾರಿದ್ದಾರೆ.  ರಾಮನಗರ ಉಸ್ತುವಾರಿ ಸಚಿವರಾಗದೆ ಬೆಂಗಳೂರಿಗೆ ಬಂದಿದ್ದೀರಿ. ಜನರಿಗೆ ಒಳ್ಳೆಯದು ಮಾಡಲ್ಲ, ಆದ್ರೆ ಕೆಟ್ಟದ್ದನ್ನಂತೂ ಮಾಡಬೇಡಿ. ಮಂತ್ರಿ ಆಗಿ ಎಷ್ಟು ಕೆಡಿಪಿ ಸಭೆಗಳನ್ನು ಮಾಡಿದ್ದೀರಿ ಎಂದು ಪ್ರಶ್ನಿಸಿದರು.

4 ಬಾರಿ ಸಾತನೂರು, 4 ಬಾರಿ ಕನಕಪುರ ಕ್ಷೇತ್ರ ಪ್ರತಿನಿಧಿಸಿದ್ದೀರಿ. ಇಷ್ಟಾದರೂ ನಿಮ್ಮ ಕ್ಷೇತ್ರ ಅಭಿವೃದ್ಧಿ ಆಗಿಲ್ಲ. ಡಿ.ಕೆ.ಶಿವಕುಮಾರ್ ​ಗೆ ಇಷ್ಟು ವರ್ಷವಿಲ್ಲದ ಪರಿಜ್ಞಾನ ಈಗ ಬಂತಾ? ಎಂದು ಅಶ್ವತ್ಥ್ ನಾರಾಯಣ್ ಹರಿಹಾಯ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್​.ಡಿ.ಕುಮಾರಸ್ವಾಮಿ ಸತ್ಯಾಗ್ರಹಕ್ಕೆ ನಮ್ಮ ಬೆಂಬಲ ಇದೆ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.

Key words: Ramanagara -name –change- issue-Aswath Narayan – DCM DK Shivakumar.