ರಾಜ್ಯದಲ್ಲಿ ಮತ್ತೆ ಐದು ಒಮಿಕ್ರಾನ್ ಪ್ರಕರಣಗಳು ಪತ್ತೆ.

Promotion

ಬೆಂಗಳೂರು,ಡಿಸೆಂಬರ್,20,2021(www.justkannada.in):  ರಾಜ್ಯದಲ್ಲಿ  ಕೊರೋನಾ ರೂಪಾಂತರಿ ಒಮಿಕ್ರಾನ್  ಸೋಂಕು ಮತ್ತೆ ಕಾಣಿಸಿಕೊಂಡಿದ್ದು ಐವರಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ.

ಈ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವಿಟ್ ಮಾಡಿ ಮಾಹಿತಿ ನೀಡಿದ್ದಾರೆ. ಧಾರವಾಡ, ಭದ್ರಾವತಿ, ಉಡುಪಿಯಲ್ಲಿ  ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಭದ್ರಾವತಿಯಲ್ಲಿ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ 20 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಗೆ, ಉಡುಪಿಯಲ್ಲಿ ಒಂದೇ ಕುಟುಂಬದ ಇಬ್ಬರಿಗೆ ಅಂದರೆ  82 ವರ್ಷ ಮತ್ತು 73 ವರ್ಷದ ವೃದ್ಧ ದಂಪತಿಗಳಿಗೆ ಸೋಂಕು ತಗುಲಿದೆ.

ಧಾರವಾಡದ 54 ವರ್ಷದ  ವ್ಯಕ್ತಿಯಲ್ಲಿ ಮಂಗಳೂರಿನ 19 ವರ್ಷದ ಯುವತಿಯಲ್ಲಿಯೂ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಓಮಿಕ್ರಾನ್ ಸೋಂಕು ಪ್ರಕರಣಗಳು 19ಕ್ಕೆ ಏರಿದೆ.

Key words: Five-Omicron- cases -detected -again – state.