ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವು: ಇಬ್ಬರಿಗೆ ಗಾಯ…

Promotion

ಮೈಸೂರು,ಅ,21,2019(www.justkannada.in):  ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ ಇಬ್ಬರಿಗೆ ಗಾಯಗಳಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ತಿ.ನರಸೀಪುರ ತಾಲೂಕಿನ ತಲಕಾಡು- ಮುಡುಕುತೊರೆ ರಸ್ತೆಯಲ್ಲಿ ಈ ಘಟನೆ ನಡೆದಿದೆ. ರೇಚಣ್ಣ(23) ಮೃತಪಟ್ಟ ಬೈಕ್ ಸವಾರ . ಮಣಿ(23) ಮತ್ತು ವಿಜಯ್ ಕುಮಾರ್ (22) ಗಾಯಗೊಂಡವರು. ಎಲ್ಲರೂ ಹೊಸ ಹೆಮ್ಮಿಗೆ ಗ್ರಾಮದ ನಿವಾಸಿಗಳು ಎಂದು ಹೇಳಲಾಗುತ್ತಿದೆ.

ಮೂವರು ಯುವಕರು ಬಣ್ಣ ಹೊಡೆಯುವ ಕೆಲಸಕ್ಕಾಗಿ ಕೊಡಗನಹಳ್ಳಿ ಗ್ರಾಮಕ್ಕೆ ಹೋಗಿದ್ದರು. ಕೆಲಸ ಮುಗಿಸಿ ಬೈಕ್‌ನಲ್ಲಿ  ಹಿಂದಿರುಗುವಾಗ ಈ ಅಪಘಾತ ಸಂಭವಿಸಿದೆ. ಈ ಕುರಿತು ತಲಕಾಡು ಉಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: Bike rider- death-road accident-mysore