ರಂಗೇರಿದ ಚುನಾವಣಾ ಕಣ: ಸಂದೇಶ್ ನಾಗರಾಜ್ ಭೇಟಿ ಮಾಡಿದ ಸಚಿವ ಎಸ್.ಟಿ ಸೋಮಶೇಖರ್.

Promotion

ಮೈಸೂರು,ನವೆಂಬರ್,23,2021(www.justkannada.in):  ವಿಧಾನ ಪರಿಷತ್ ಚುನಾವಣಾ ಕಣ ರಂಗೇರಿದ್ದು   ಇಂದು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಂತ್ಯವಾಗಿದೆ. ಈ ಮಧ್ಯೆ ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಬಳಿಕ ಜೆಡಿಎಸ್ ಬಾಗಿಲು ಬಡಿದಿದ್ದ ಸಂದೇಶ್ ನಾಗರಾಜ್  ಅವರು ಕೊನೆಗೆ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧಾರ ಕೈಗೊಂಡಿದ್ದಾರೆ.

ಈ ಬಳಿಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ಸಂದೇಶ್  ನಾಗರಾಜ್ ಅವರನ್ನ ಭೇಟಿ ಮಾಡಿದ್ದು ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಅವರನ್ನ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.  ಸಂದೇಶ್ ನಾಗರಾಜ್ ನಿವಾಸಕ್ಕೆ  ಭೇಟಿ ನೀಡಿದ ಸಚಿವ ಎಸ್.ಟಿ ಸೋಮಶೇಖರ್ ಬಿಜೆಪಿ ಅಭ್ಯರ್ಥಿ ಬೆಂಬಲಿಸುವಂತೆ ಕೋರಿದರು.

ಈ ವೇಳೆ ಸಂದೇಶ್ ನಾಗರಾಜ್ ಅವರು ಬಿಜೆಪಿ ಅಭ್ಯರ್ಥಿ ಕೌಟಿಲ್ಯ ರಘು ಗೆ  ಸಂಪೂರ್ಣ ಬೆಂಬಲ ನೀಡುವುದಾಗಿ  ತಮ್ಮ ಬೆಂಬಲಿಗರು ಕೌಟಿಲ್ಯ ರಘು ರನ್ನು ಬೆಂಬಲಿಸುವಂತೆ ಸೂಚಿಸುವುದಾಗಿ ತಿಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ ಎಂದು ಇದೇ ವೇಳೆ ಸಚಿವರಿಗೆ ಸಂದೇಶ್ ನಾಗರಾಜ್ ಅಭಯ ನೀಡಿದ್ದಾರೆ ಎನ್ನಲಾಗಿದೆ.

ಮೈಸೂರು -ಚಾಮರಾಜನಗರ ಕ್ಷೇತ್ರದಿಂದ  ಸಂದೇಶ್ ನಾಗರಾಜ್ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ರಘು ಕೌಟಿಲ್ಯ ಅವರಿಗೆ ಟಿಕಟ್ ನೀಡಲಾಗಿದೆ. ಇದಾದ ಬಳಿಕ ಸಂದೇಶ್ ನಾಗರಾಜ್  ಜೆಡಿಎಸ್ ನಾಯಕರನ್ನ ಸಂಪರ್ಕಿಸಿದ್ದರು.

Key words: legislative election –minister-ST Somashekhar –  met -Sandesh Nagaraj.