ಯೋಧರಿಗೆ ನೀಡುವ ಪ್ರಶಸ್ತಿ ಮೊತ್ತ 5 ಪಟ್ಟು ಹೆಚ್ಚಳ: ಸಿಎಂ ಬೊಮ್ಮಾಯಿ ಘೋಷಣೆ.

Promotion

ಬೆಳಗಾವಿ,ಡಿಸೆಂಬರ್16,2021(www.justkannada.in): ಯೋಧರಿಗೆ ನೀಡುವ ಪ್ರಶಸ್ತಿ ಮೊತ್ತವನ್ನು 5 ಪಟ್ಟು ಹೆಚ್ಚಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ನಗದು ಅನುದಾನದ ಮೊತ್ತದ ಬಗ್ಗೆ ಪರಿಷ್ಕರಣೆ ನಡೆಸಿದ ಸರ್ಕಾರ ಶೌರ್ಯ ಪ್ರಶಸ್ತಿ ವಿಜೇತರಿಗೆ ನೀಡುವ ನಗದು ಅನುದಾನವನ್ನು ಇದೀಗ ಐದು ಪಟ್ಟು ಹೆಚ್ಚಿಸಿದೆ. ಈ ಕುರಿತು ಬೆಳಗಾವಿಯಲ್ಲಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಪರಮವೀರ ಚಕ್ರ 25 ಲಕ್ಷದಿಂದ 1.5 ಕೋಟಿ ರೂ. ಗೆ, ಮಹಾವೀರ ಚಕ್ರ 12 ಲಕ್ಷದಿಂದ 1 ಕೋಟಿ‌ ರೂಪಾಯಿ, ಅಶೋಕ ಚಕ್ರ 25 ಲಕ್ಷದಿಂದ 1.5 ಕೋಟಿ ರೂಪಾಯಿ, ಕೀರ್ತಿ ಚಕ್ರ 12 ಲಕ್ಷದಿಂದ 1 ಕೋಟಿ ರೂಪಾಯಿ, ವೀರ ಚಕ್ರ 8 ಲಕ್ಷದಿಂದ 50 ಲಕ್ಷ ರೂಪಾಯಿ, ಶೌರ್ಯ ಚಕ್ರ 8 ಲಕ್ಷದಿಂದ 50 ಲಕ್ಷ ರೂಪಾಯಿ, ಸೇನಾ ಮೆಡಲ್‌ 2 ಲಕ್ಷದಿಂದ 15 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿ  ಆದೇಶ ಹೊರಡಿಸಲಾಗಿದೆ.

Key words:  award-amount- soldiers-increase- Declaration – CM-Basavaraj Bommai

ENGLISH SUMMARY…

Amount of cash prize given to soldiers increased by five times: CM Bommai announces
Belagavi, December 16, 2021 (www.justkannada.in): Chief Minister Basavaraj Bommai today announced that the State Government has decided to increase the amount of cash prize given to soldiers by five times.
The State Government, which revised the amount of cash prize given to Shourya award winners, has decided to increase it by five times. The Chief Minister announced this in Belagavi today.
The amount of cash prizes given to soldiers according to the revision is as follows: Paramvir Chakra (from Rs.25 lakh to Rs. 1.5 crores), Mahavir Chakra (from Rs. 12 lakh to Rs. 1 crore), Ashoka Chakra (from Rs. 25 lakh to Rs. 1.5 crores), Keerti Chakra (from Rs. 12 lakh to Rs. 1 crore), Vir Chakra (from Rs. 8 lakh to Rs. 50 lakh), Shourya Chakra (from Rs. 8 lakh to Rs. 50 lakh), Sena Medal (from Rs. 2 lakh to Rs. 15 lakh).
Keywords: Amount of cash prize/ soldiers/ increase/ by 5 times/ State Government