ಮುಡಾದಿಂದ ಮುಂದುವರೆದ ಕಾರ್ಯಾಚರಣೆ: ಬರೊಬ್ಬರಿ 170 ಕೋಟಿ ರೂ. ಮೌಲ್ಯದ ಸ್ವತ್ತು ವಶಕ್ಕೆ.

Promotion

ಮೈಸೂರು,ಡಿಸೆಂಬರ್,24,2021(www.justkannada.in):  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಾರ್ಯಾಚರಣೆ ಮುಂದುವರೆದಿದ್ದು,  ಬರೊಬ್ಬರಿ 170 ಕೋಟಿ ರೂ. ಮೌಲ್ಯದ ಒಟ್ಟು 163 ನಿವೇಶನವನ್ನ ಮುಡಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮೈಸೂರು ತಾಲ್ಲೂಕು ಕಸಬಾ ಹೋಬಳಿ ಬಸವನಹಳ್ಳಿ ಗ್ರಾಮ, ವಿಜಯನಗರ 4ನೇ ಹಂತದಲ್ಲಿ ಮುಡಾ ಕಾರ್ಯಾಚರಣೆ ನಡೆಸಿ 30×40 ಅಳತೆಯ 19 ನಿವೇಶನ, 20×30 64 ನಿವೇಶನ, 40×60 ಅಳತೆಯ 35 ನಿವೇಶನ ಹಾಗೂ ಅನಿಮಿಯತ ಅಳತೆಯ 45 ನಿವೇಶನ ಸೇರಿದಂತೆ ಒಟ್ಟು 163 ನಿವೇಶನ ಸ್ವತ್ತು ವಶ ಪಡೆದಿದೆ.

ಮುಡಾ ಆಯುಕ್ತ ಡಿ.ಬಿ ನಟೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಇತ್ತೀಚೆಗಷ್ಟೇ ಮುಡಾ ನೂರು ಕೋಟಿ ಮೌಲ್ಯದ ಜಮೀನನ್ನ ವಶಕ್ಕೆ ಪಡೆದಿತ್ತು.

Key words: Continued- operation –Muda-170 crores- worth -assets -seized.