ಬಿಟ್ ಕಾಯಿನ್ ಪ್ರಕರಣ ಮೂಲಕ ಡಿಕೆಶಿ ಸೈಡ್ ಲೈನ್ ಮಾಡಲು ಸಿದ್ದರಾಮಯ್ಯ ಯತ್ನ- ಕ್ಯಾಪ್ಟನ್ ಗಣೇಶ್ ಕಾರ್ಣಿಕ್

Promotion

ಬೆಂಗಳೂರು,ನವೆಂಬರ್,16,2021(www.justkannada.in):  ಡಿ.ಕೆ ಶಿವಕುಮಾರ್ ಅವರನ್ನ ಮಾಜಿ ಸಿಎಂ ಸಿದ್ಧರಾಮಯ್ಯ ಸೈಡ್ ಲೈನ್ ಮಾಡಲು ಯತ್ನಿಸುತ್ತಿದ್ದಾರೆ. ಹೀಗಾಗಿ ಬಿಟ್ ಕಾಯಿನ್ ಹಗರಣ ಕೈಗೆತ್ತಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಲೇವಡಿ ಮಾಡಿದ್ದಾರೆ.

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಡಿಕೆಶಿ ಸೈಡ್ ಲೈನ್ ಮಾಡಲು ಸಿದ್ಧು ಯತ್ನಿಸುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಮೇಲೆ ನನಗೆ ಅನುಕಂಪ ಇದೆ. ಡಿಕೆ ಶಿವಕುಮಾರ  ಅಧ್ಯಕ್ಷರಾದಾಗಿಂದಲೂ ನಿದ್ಧೆ ಮಾಡಿಲ್ಲ. ನಿದ್ಧೆ ಮಾಡಲು ಸಿದ್ಧರಾಮಯ್ಯ ಬಿಟ್ಟಿಲ್ಲ. ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್​ರನ್ನು ಮೂಲೆಗುಂಪು ಮಾಡುತ್ತಿದ್ದಾರೆ  ಎಂದರು.

ಸಿದ್ಧರಾಮಯ್ಯ ನಿರುದ್ಯೋಗಿಯಾಗಿದ್ದಾರೆ. ಹೀಗಾಗಿ ಬಿಟ್ ಕಾಯಿನ್ ಆರೋಪ ಮಾಡಿದ್ದಾರೆ.  ಹೈಕಮಾಂಡ್ ಬಳಿ ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದು,  ಈ ಮೂಲಕ ಡಿ.ಕೆ ಶಿವಕುಮಾರ್ ಸೈಡ್ ಲೈನ್ ಮಾಡಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಯಾವುದೇ ರಾಜ್ಯ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ. ರೈತರ ಸಮಸ್ಯೆ, ಬರ, ಪ್ರವಾಹ ಬಗ್ಗೆ ರಾಜ್ಯ ಸಂಚಾರ ಮಾಡಲಿಲ್ಲ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್  ವಾಗ್ದಾಳಿ ನಡೆಸಿದರು.

Key words: Siddaramaiah- side line-DK shivakumar- bitcoin case-Captain Ganesh Karnik