ಬಿಜೆಪಿ ಸುನಾಮಿಗೆ ಕಾಂಗ್ರೆಸ್ ಕೊಚ್ಚಿ ಹೋಗುತ್ತೆ: ಹಾನಗಲ್ ನಲ್ಲಿ  ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ- ಸಿಎಂ ಬಸವರಾಜ ಬೊಮ್ಮಾಯಿ.

Promotion

ಹಾವೇರಿ,ಅಕ್ಟೋಬರ್,27,2021(www.justkannada.in): ಬಿಜೆಪಿ ಸುನಾಮಿಗೆ ಕಾಂಗ್ರೆಸ್ ಕೊಚ್ಚಿ ಹೋಗುತ್ತೆ: ಹಾನಗಲ್ ನಲ್ಲಿ  ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ  ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಾನಗಲ್ ನ ಮಾಸನಕಟ್ಟಿಯಲ್ಲಿ  ಪ್ರಚಾರದಲ್ಲಿ ತೊಡಗಿ ಮಾತನಾಢಿದ ಸಿಎಂ ಬಸವರಾಜ ಬೊಮ್ಮಾಯಿ, ಹಾನಗಲ್ ನಲ್ಲಿ ಬಿಜೆಪಿ ಪರ ಅಲೆ ಇದೆ. ಹೀಗಾಗಿ ಶಿವಾರಾಜ್ ಸಜ್ಜನರ್ 25 ಸಾವಿರ ಮತಗಳ ಅಂತರಿಂದ ಗೆಲುವು ಸಾಧಿಸುತ್ತಾರೆ.ನೀವು ನೀಡೋ ಮತಕ್ಕೆ ಹೂವು ತರ್ತೆನೇ ಹೊರತು ಹುಲ್ಲನ್ನಲ್ಲ ಎಂದರು.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನವರು ಭಾಷಣದಿಂದಲೇ ಜನರ ಹೊಟ್ಟೆ ತುಂಬಿಸಿದ್ದಾರೆ. ಕಾಂಗ್ರೆಸ್ ಬರೀ ಘೋಷಣೆಗಳ ಪಾರ್ಟಿ. ಬಿಜೆಪಿ ಹವಾ ಒಡೆಯೋಕೆ ಚೀಲತಂದಿದ್ದಾರೆ. ಕಾಂಗ್ರೆಸ್  ಎಲ್ಲಾ ಲೀಡರ್ಸ್ ಗಳು ಬಂದಿದ್ದಾರೆ.   ಕಾಂಗ್ರೆಸ್  ಮತಗಳನ್ನ ಒಡೆಯುವ ಕೆಲಸ ಮಾಡುತ್ತಿದ್ದಾರೆ. ನಿಮ್ಮ ನಿಮ್ಮ ಮತಗಟ್ಟೆಗಳಲ್ಲಿ ಎಚ್ಚರದಿಂದಿರಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಿದರು.

Key words: Congress – BJP –tsunami-Our candidate-victory – Honegal- CM Basavaraja Bommai.