ಪ್ರಧಾನಿ ಮೋದಿ-ಹೆಚ್.ಡಿಡಿ ಭೇಟಿ ವಿಚಾರ: ಸಿದ್ಧರಾಮಯ್ಯಗೆ ಪರೋಕ್ಷ ಟಾಂಗ್ ನೀಡಿದ ಹೆಚ್.ವಿಶ್ವನಾಥ್.

Promotion

ಮೈಸೂರು,ಡಿಸೆಂಬರ್,3,2021(www.justkannada.in):  ಪ್ರಧಾನಿ ನರೇಂದ್ರ ಮೋದಿ ಅವರನ್ನ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಟೀಕಿಸಿದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪರೋಕ್ಷ ಟಾಂಗ್ ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ಪ್ರಧಾನಿ ಮೋದಿ ಕುಟುಂಬ ರಾಜಕಾರಣದ ಬಗ್ಗೆ ಹೇಳಿದ್ದರು. ಗೆದ್ದಲಿನ ರೀತಿ ಕಾಡುತ್ತಿದೆ ಅಂದರು. ಹಾಲಿ ಪ್ರಧಾನಿ ಮಾಜಿ ಪ್ರಧಾನಿ‌ ಭೇಟಿ ಸೌಜನ್ಯದ ಭೇಟಿಯಾಗಿತ್ತು. ಅದನ್ನೇ ಕೆಲವರು ರಾಜಕಾರಣ ಮಾಡಿದರು. ಮಿಕ್ಕವರು ಮೋದಿಯಿಂದ ಸೌಜನ್ಯ ಕಲಿಯಬೇಕು. ಏಕವಚನದಲ್ಲಿ ಎಲ್ಲರ ಬಗ್ಗೆ ಮಾತನಾಡುವುದಲ್ಲ ಎಂದು  ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

ಜನಪ್ರತಿನಿಧಿಗಳ ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಹಾಕಿ..

ವಿಧಾನಪರಿಷತ್ ಚುನಾವಣೆ ಕುರಿತು ಮಾತನಾಡಿದ ಹೆಚ್.ವಿಶ್ವನಾಥ್, ಶೇ.98 ಭಾಗ ಸ್ವಂತ ಸಾಮರ್ಥ್ಯದಿಂದ ಗೆದ್ದವರು. ಈಗಾಗಿ ಈ ಚುನಾವಣೆ ಬಹಳ‌ ವಿಶೇಷವಾದದ್ದು. ಇದನ್ನು ನಾವು ದಿಕ್ಕೆಡಿಸುತ್ತಿದ್ದೇವೆ. 40 ಕೋಟಿಯಿಂದ 1700 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಅವರು ನಮ್ಮ ಸಾರ್ವಭೌಮ ಸದನಕ್ಕೆ ಬರಲು ಆಪೇಕ್ಷೆ ಪಡುತ್ತಿದ್ದಾರೆ. ಈ ಬಾರಿ ಕರ್ನಾಟಕದಲ್ಲಿ ಕ್ರಾಂತಿಯಾಗಲಿ. ಮೂರು ಪಕ್ಷದ ಮುಖಂಡರು ಸಂದೇಶ ನೀಡಬೇಕು. ಇದರಿಂದ ಏನು ಸಂದೇಶ ಕೊಡುತ್ತಿದ್ದೇವೆ.ಇದು ತಮಾಷೆಯ ಮಾತಲ್ಲ. ಯುವಕರಿಗೆ ಏನು ಸಂದೇಶ.  ದುಡ್ಡು ತಗೊಂಡು ಮತ ಹಾಕಿ ಅಂತಾನಾ. ಟಿಕೆಟ್ ಕೊಡುವಾಗಲೇ 15 ಕೋಟಿ ಇದ್ದರೆ ಬನ್ನಿ ಅನ್ನೋದು. ಜನಪ್ರತಿನಿಧಿಗಳ ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಹಾಕಿ, ಚುನಾವಣೆ ಪಾವಿತ್ರ್ಯತೆ ಎತ್ತಿ ಹಿಡಿಯಿರಿ. ಯಾರಿಗೂ ಹೆದರದೆ ಮುಲಾಜು ಇಲ್ಲದೆ ಮತ ಹಾಕಿ ಎಂದು ಮತದಾರರಿಗೆ ಎಚ್ ವಿಶ್ವನಾಥ್ ಕರೆ ನೀಡಿದರು.

ಸಿದ್ದರಾಮಯ್ಯ, ಯಡಿಯೂರಪ್ಪ ಕುಮಾರಸ್ವಾಮಿ ಏನು ಸಂದೇಶ ಕೊಡುತ್ತಾ ಇದ್ದೀರಾ ? ಬರೀ ಕೆಲಸಕ್ಕೆ ಬಾರದ ಮಾತುಗಳನ್ನು ಆಡುತ್ತಿದ್ದೀರಾ. ಕುಡುಕ ಕಳ್ಳ ಅಂತಾರೆ ಇದು ರಾಜ್ಯದ ಮುಖಂಡರು ಆಡೋ ಮಾತುಗಳ ? ಈಗಲೂ ಕಾಲ ಮಿಂಚಿಲ್ಲ ಎಚ್ಚೆತ್ತುಕೊಳ್ಳಿ. ನಿಮ್ಮ ನಿಮ್ಮ ಪಕ್ಷದವರಿಗೆ ಕರೆ ಕೊಡಿ ಎಂದು ಹೆಚ್.ವಿಶ್ವನಾಥ್ ಸಲಹೆ ನೀಡಿದರು.

ನನ್ನ ಬಳಿಯೂ ಕೆಲವು ಸದಸ್ಯರು ಬಂದಿದ್ದರು. ನನ್ನ ಬಳಿಯೇ ಬಂದು ಬಜಾರ್ ಕೇಳಿದರು. 50 ಸಾವಿರ ಮಂಡ್ಯದಲ್ಲಿ ಹಾಸನದಲ್ಲಿ 1 ಲಕ್ಷ ಅಂತಾರೆ. ಮೈಸೂರಲ್ಲಿ ಎಷ್ಟು ಇದೆ ಬಜಾರ್ ಹೇಳಿ ಸರ್ ಅಂದರು ನಾಯಕರು ಓಟ್ ಬಜಾರ್ ಮಾಡಿದ್ದಾರೆ ಎಂದು ಎಚ್ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

Key words: mysore-MLC- H. Vishwanath-indirect -tong –Former CM- Siddaramaiah.