ಪರೀಕ್ಷೆ ಒತ್ತಡದಿಂದ ಬೇಸತ್ತು ಪಿಎಚ್ ಡಿ ವಿದ್ಯಾರ್ಥಿನಿ ಆತ್ಮಹತ್ಯೆ.

Promotion

ಮೈಸೂರು,ನವೆಂಬರ್,6,2021(www.justkannada.in): ಎಕ್ಸಾಂ ಟೆನ್ಷನ್ ನಿಂದಾಗಿ ಬೇಸತ್ತ  ಪಿಹೆಚ್.ಡಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಸರಸ್ವತಿಪುರಂನಲ್ಲಿ ಈ ಘಟನೆ ನಡೆದಿದೆ.  ರಶ್ಮಿ (29) ಮೃತ ವಿದ್ಯಾರ್ಥಿನಿ. ರಶ್ಮಿ ಎಂಎಸ್ಸಿ ಕೆಮಿಸ್ಟ್ರಿ ಮುಗಿಸಿ PHD ಮಾಡುತ್ತಿದ್ದರು. ಸರಸ್ವತಿಪುರಂ 9 ನೇ ಮೇನ್ ನಲ್ಲಿರುವ ಪಿಜಿ ಯಲ್ಲಿ ಚಾಮರಾಜನಗರ ಮೂಲದ ರಶ್ಮಿ ಉಳಿದುಕೊಂಡಿದ್ದರು. ಈ ಮಧ್ಯೆ ಜೆಎಸ್ ಎಸ್ ನಲ್ಲಿ ಪಾರ್ಟ್ ಟೈಂ ಲೆಕ್ಚರರ್ ಆಗಿಯೂ ರಶ್ಮಿ ಕಾರ್ಯ ನಿರ್ವಹಿಸುತ್ತಿದ್ದರು.

ಕೆಮಿಸ್ಟ್ರಿ ವಿಚಾರದಲ್ಲಿ PHD ಮಾಡುತ್ತಿದ್ದ ರಶ್ಮಿ ಪರೀಕ್ಷೆಗೆ ಸಿದ್ದತೆ ಮಾಡಿಕೊಂಡಿರಲಿಲ್ಲವೆಂದು ಹೇಳಲಾಗಿದೆ. ಹೀಗಾಗಿ ಪರೀಕ್ಷೆ ಒತ್ತಡದಿಂದ ಬೇಸತ್ತು ರಶ್ಮಿ ಪಿಜಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Suicide – PhD –student- – exam –stress-mysore