ಪರಿಷತ್ ಚುನಾವಣೆಯಲ್ಲಿ 15 ಸ್ಥಾನ ಗೆಲ್ಲುತ್ತೇವೆ ಎಂಬ ಮಾಜಿ ಸಿಎಂ ಬಿಎಸ್ ವೈ ಹೇಳಿಕೆಗೆ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದು ಹೀಗೆ.

Promotion

ಬೆಂಗಳೂರು,ಡಿಸೆಂಬರ್,11,2021(www.justkannada.in): ವಿಧಾನ ಪರಿಷತ್ ನಲ್ಲಿ ಬಿಜೆಪಿ 20ಸ್ಥಾನಗಳಿಗೆ ಸ್ಪರ್ಧೆ ಮಾಡಿದ್ದು ಈ ಪೈಕಿ 15 ಸ್ಥಾನ ಗೆಲ್ಲುತ್ತೇವೆ ಎಂಬ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಪರಿಷತ್ ನಲ್ಲಿ ಬಿಎಸ್ ವೈ ಅವರಿಗೆ ಎಷ್ಟು ಸ್ಥಾನ ಬೇಕೋ ಅಷ್ಟು ಸ್ಥಾನ ಇಟ್ಟುಕೊಳ್ಳಲಿ. ಉಳಿದ ಸ್ಥಾನ ನಮಗೆ ಬಿಟ್ಟುಕೊಡಲಿ ಅದೇ ಪಂಚಾಮೃತ ಎಂದು ಭಾವಿಸುತ್ತೇವೆ ಎಂದು ಲೇವಡಿ ಮಾಡಿದರು.

ಮತಾಂತರ ನಿಷೇಧ ಕಾಯ್ದೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್,  ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದ್ದಾರೆ.  ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್ ವಿರೋಧಿಸಲಿದೆ.  ವಿದೇಯಕ ಮಂಢನೆಗೆ ಕಾಂಗ್ರೆಸ್ ವಿರೋಧಿಸಲಿದೆ. ಚುನಾವಣೆ ಹಿನ್ನೆಲೆ ಪ್ರಮುಖ ಸಮುದಾಯಗಳ ಟಾರ್ಗೆಟ್ ಮಾಡುತ್ತಿದೆ.  ಮತಾಂತರ ನಿಷೇಧ ಕಾಯ್ದೆ ಅಂತರಾಷ್ಟ್ರೀಯ ವಿಚಾರ ಎಂದರು.

Key words: kpcc president- DK Shivakumar -former CM BS yeddyurappa- statement – win-15 seats.