ದೇವಸ್ಥಾನಗಳಿಗೆ ಕೈ ಹಾಕಿದರೇ ಸುಟ್ಟು ಹೋಗುತ್ತಾರೆ- ಬಿಜೆಪಿ ವಿರುದ್ಧ ಡಿ.ಕೆ ಶಿವಕುಮಾರ್ ಗುಡುಗು.

Promotion

ಬೆಂಗಳೂರು,ಡಿಸೆಂಬರ್,31,2021(www.justkannada.in): ದೇವಸ್ಥಾನಗಳು ಮುಜರಾಯಿ ಮುಕ್ತ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗುಡುಗಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ದೇವಸ್ಥಾನಗಳು ಮುಜರಾಯಿ ಮುಕ್ತ ಎಂಬ ಹೇಳಿಕೆ ಖಂಡಿಸುತ್ತೇವೆ ಮುಜರಾಯಿಯಲ್ಲಿ ಐಎಎಸ್ ಐಪಿಎಸ್ ಅಧಿಕಾರಿಗಳಿದ್ದಾರೆ. ದೇವಸ್ಥಾನಗಳಲ್ಲಿ ಕೋಟ್ಯಂತರ ಹಣ ಇದೆ. ಹೀಗಾಗಿ ಬಿಜೆಪಿ ಕಾರ್ಯಕರ್ತರಿಗೆ ಹಂಚಲು ಹೊರಟಿದ್ದಾರೆ ಎಂದು ಸರ್ಕಾರದ ವಿರುದ್ಧ ಆರೋಪ ಮಾಡಿದರು.

ಚುನಾವಣೆಗಳಲ್ಲಿ ಬಿಜೆಪಿ ಸೋಲುತ್ತಿರುವ ಹಿನ್ನೆಲೆ . ಜನರ ಮುಂದೇ ಭಾವನಾತ್ಮಕ ವಿಚಾರ ಮುಂದಿಡುತ್ತಿದ್ದಾರೆ. ದೇವಸ್ಥಾನಗಳು ಈಗ ಹೇಗೆ ಇದೆಯೋ ಹಾಗೇ ಇರಬೇಕು ದೇವಸ್ಥಾನಗಳಿಗೆ ಕೈ ಹಾಕಿದರೇ ಸುಟ್ಟು ಹೋಗುತ್ತಾರೆ. ಬಿಜೆಪಿಯವರು ಹಿಂದೂ ವಿರೋಧಿಗಳು.  ಬಿಜೆಪಿಯವರದ್ದು ಎಷ್ಟು ಕಠೋರ ಹೃದಯ ಎಂದು ಕಿಡಿಕಾರಿದರು.

ನಾವೂ ಕೂಡ ಹಿಂದೂಗಳು, ನಮಗೂ ಸಂಸ್ಕೃತಿ ಇದೆ. ನಾವು ಹಿಂದುಗಳ ಪರವಾಗಿದ್ದೇವೆ ಎಂದು ಸರ್ಕಾರ ಜನರ ಕಲ್ಯಾಣಕ್ಕೆ ಕಾನೂನು ಮಾಡುತ್ತಿಲ್ಲ ಎಂದು ಹರಿಹಾಯ್ದರು.

Key words: temples-mujarayi-kpcc-president- DK Shivakumar – against- BJP.