ತೆಲುಗು ನಟ ಸಾಯಿ ಧರ್ಮ ತೇಜ ಬೈಕ್ ಅಪಘಾತ: ಆಸ್ಪತ್ರೆಗೆ ದಾಖಲು.

Promotion

ಹೈದರಾಬಾದ್,ಸೆಪ್ಟಂಬರ್,11,2021(www.justkannada.in):  ತೆಲುಗು ನಟ ಸಾಯಿ ಧರ್ಮ ತೇಜ ಚಲಾಯಿಸುತ್ತಿದ್ದ​ ಬೈಕ್ ಅಪಘಾತಕ್ಕೀಡಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡದಿದೆ.

ಹೈದರಾಬಾದ್‌ನ ಮಾದಾಪುರ ಕೇಬಲ್ ಬ್ರಿಡ್ಜ್​​ ಬಳಿ ಈ ಘಟನೆ ನಡೆದಿದೆ. ನಟ ನಟ ಸಾಯಿ ಧರ್ಮ ತೇಜ ತನ್ನ ಸ್ಪೋರ್ಟ್ಸ್ ಬೈಕ್​ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಟ ಸಾಯಿ ತೇಜಾ ಗಾಯಗೊಂಡಿದ್ದು ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರಸ್ತೆ ಬದಿ ನಿರ್ಮಾಣ ಮಾಡಲು ರಸ್ತೆ ಬಳಿ ಮರಳನ್ನ ಹಾಕಲಾಗಿತ್ತು ಹೀಗಾಗಿ ರಸ್ತೆಯಲ್ಲಿದ್ದ ಮರಳಿನಿಂದಾಗಿ ಬೈಕ್ ಸ್ಕಿಡ್ ಆಗಿ ಬೈಕ್ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಇನ್ನು ನಟ ಸಾಯಿ ಧರ್ಮ ತೇಜ ಆರೋಗ್ಯದ ಬಗ್ಗೆ ಖಾಸಗಿ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು ಸಾಯಿ ಧರ್ಮ ತೇಜ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

Key words: Telugu -actor -Sai Dharma Teja -bike –accident- Hospitalization.