ತಾಕತ್ತಿದ್ದರೆ ಡಿಕೆಶಿ ಕೈವಾಡದ ಬಗ್ಗೆ ವಿಡಿಯೋ ಬಿಡುಗಡೆ ಮಾಡಲಿ- ಮೊಹಮ್ಮದ್ ನಲಪಾಡ್ ಸವಾಲು.

Promotion

ಯಾದಗಿರಿ,ಜನವರಿ,25,2023(www.justkannada.in): ಸಿಡಿ ಕೇಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೈವಾಡವಿದೆ ಎಂದು ಆರೋಪಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಸವಾಲು ಹಾಕಿದ್ದಾರೆ.

ಯಾದಗಿರಿಯಲ್ಲಿ ಇಂದು ಮಾತನಾಡಿದ ನಲಪಾಡ್, ರಮೇಶ್ ಜಾರಕಿಹೊಳಿ ಮಾಡಿರುವುದನ್ನ ಇಡೀ ದೇಶವೇ ನೋಡಿದೆ.  ಡಿಕೆ ಶಿವಕುಮಾರ್ ಕೈವಾಡದ ಬಗ್ಗೆ ಆಡಿಯೂ ಇದ್ದರೇ ಬಿಡುಗಡೆ ಮಾಡಲಿ ಜಾರಕಿಹೊಳಿ ಸುಮ್ಮನೆ ಆಕಾಶದಲ್ಲಿ ಗುಂಡು ಹೊಡೆಯುತ್ತಾರೆ.  ತಾಕತ್ತಿದ್ದರೇ ಡಿಕೆ ಶಿವಕುಮಾರ್ ಕೈವಾಡದ ಬಗ್ಗೆ ವಿಡಿಯೋ ಬಿಡುಗಡೆ ಮಾಡಲಿ ಎಂದರು.

ಡಿ.ಕೆ ಶಿವಕುಮಾರ್ ಜನಪರವಾದ ಕೆಲಸಗಳನ್ನ ಮಾಡಿದ್ದಾರೆ. ಕೋವಿಡ್ ಸಂದರ್ಭಧಲ್ಲಿ ಬಡವರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಬಿಜೆಪಿಯಲ್ಲಿ ಒಬ್ಬರು ಲಂಚಕ್ಕೆ ಮತ್ತೊಬ್ಬರು ಮಂಚಕ್ಕೆ ಹೋಗಿದ್ದಾರೆ ಎಂದು ನಲಪಾಡ್ ಟೀಕಿಸಿದರು.

Key words: release – video –DK Shivakumar- Mohammad Nalapad- challenge-Ramesh jarkiholi