ಜಿಎಸ್ ಟಿ ಇನ್ಸ್ ಪೆಕ್ಟರ್ ಕೂಡಿ ಹಾಕಿ ಹಲ್ಲೆ: ಪಬ್ ಮಾಲೀಕ ಮತ್ತು ಬೌನ್ಸರ್ಸ್ ಅರೆಸ್ಟ್.

Promotion

ಬೆಂಗಳೂರು,ನವೆಂಬರ್,10,2021(www.justkannada.in): ಜಿಎಸ್ ಟಿ ಇನ್ಸ್ ಪೆಕ್ಟರ್ ರನ್ನ ಕೂಡಿ ಹಾಕಿ ಹಲ್ಲೆ ನಡೆಸಿದ ಆರೋಪದ ಮೇಲೆ ಪಬ್ ಮಾಲೀಕ ಮತ್ತು ಬೌನ್ಸರ್ಸ್ ಗಳನ್ನ ನಗರದ ಕೋರಮಂಗಲ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೋರಮಂಗಲದ ಹ್ಯಾಪಿ ಬ್ರೋ ಪಬ್  ನಲ್ಲಿ ಈ ಘಟನೆ ನಡೆದಿದೆ. ಪಬ್ ಗೆ ಬಂದಿದ್ಧ  ಜಿಎಸ್​ಟಿ ಇನ್​ಸ್ಪೆಕ್ಟರ್​​ ವಿನಯ್ ಮಂಡಲ್ ರನ್ನ ಕೂಡಿಹಾಕಿ, ಪಬ್ ಮಾಲಿಕ ರಾಕೇಶ್ ಗೌಡ ಮತ್ತು ಬೌನ್ಸರ್​​ ಗಳು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಪಬ್ ಗೆ ಬಂದಿದ್ದ ಜಿಎಸ್​ಟಿ ಇನ್​ಸ್ಪೆಕ್ಟರ್​​  ವಿನಯ್ ಮಂಡಲ್ ಬಳಿ ಬಂದು  ಪಬ್​ ಮಾಲಿಕ ರಾಕೇಶ್ ಗೌಡ ಪರಿಚಯ ಮಾಡಿಕೊಂಡಿದ್ದ. ತಡರಾತ್ರಿ ಹನ್ನೆರಡು ಗಂಟೆ ಬಳಿಕ ಬಿಲ್ ಕೇಳಿದ್ದ. ಆಗ ಅವರಿಬ್ಬರ ಮಧ್ಯೆ ಗಲಾಟೆ ಶುರುವಾಗಿದ್ದು. ರಾತ್ರಿ ಒಂದು ಗಂಟೆಯವರೆಗೂ ಇಬ್ಬರೂ ವಾದ ಮಾಡಿಕೊಂಡಿದ್ದಾರೆ.

ಬಳಿಕ ನೀನು ಫೇಕ್ ಜಿಎಸ್​ಟಿ ಇನ್​ಸ್ಪೆಕ್ಟರ್ ಎಂದು ಇನ್​ಸ್ಪೆಕ್ಟರ್​​ ವಿನಯ್​ ರಿಗೆ ಪಬ್​ ಮಾಲಿಕ ರಾಕೇಶ್ ಬೈದಿದ್ದು ನಂತರ. ಇನ್​ಸ್ಪೆಕ್ಟರ್​​ ವಿನಯ್ ​ನನ್ನು ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕೋರಮಂಗಲ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Key words: GST -inspector –assult-Pub owner – Bouncers –Arrest-bangalore