ಗೃಹಿಣಿ ಅನುಮಾನಾಸ್ಪದ ಸಾವು: ಪತಿ ನಾಪತ್ತೆ…

Promotion

ಮೈಸೂರು,ನವೆಂಬರ್,8,2021(www.justkannada.in): ಗೃಹಿಣಿ ಅನುಮಾನಾಸ್ಪದ ಸಾವನ್ನಪ್ಪಿ ಆಕೆಯ ಪತಿರಾಯ ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ಈ ಘಟನೆ ನಡೆದಿದೆ. ಕೊಳ್ಳೆಗಾಲದ ಮಧು (26) ಮೃತಪಟ್ಟವರು. ಒಂದೂವರೆ ವರ್ಷದ ಹಿಂದೆ ಕೊಳ್ಳೆಗಾಲದ ನಿವಾಸಿ ಮಧು ಹಾಗೂ ಟಿ.ನರಸೀಪುರದ ಜಯಶಂಕರ್ ವಿವಾಹವಾಗಿದ್ದರು.  ಜಯಶಂಕರ್ ಚಾಮರಾಜನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಈ ದಂಪತಿಯ ಮನೆಯಲ್ಲಿ ಅಕ್ಟೋಬರ್ 29 ರಂದು ಬೆಂಕಿ ಆವಘಢ ಸಂಭವಿಸಿತ್ತು.man-death-lack-of-oxygen-private-hospital-mysore

ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದ ಮಧು ತೀವ್ರ ಸುಟ್ಟಗಾಯದಿಂದ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧು ಸಾವನ್ನಪ್ಪಿದ್ದು, ಮಧು ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿ ಪತಿ ಜಯಶಂಕರ್ ವಿರುದ್ದ ದೂರು ನೀಡಿದ್ದಾರೆ. ದೂರು ನೀಡಿದ ನಂತರ ಪತಿ ಜಯಶಂಕರ್ ನಾಪತ್ತೆಯಾಗಿದ್ದು, ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Suspected-death – housewife- husband-escape-mysore