ಗರ್ಭಿಣಿ ಪತ್ನಿ ಮೇಲೆ ಹಲ್ಲೆ ಮಾಡಿ ವೃದ್ಧ ದಂಪತಿಯನ್ನ ಕೊಚ್ಚಿ ಕೊಲೆಗೈದ ದುಷ್ಕರ್ಮಿ.

Promotion

ಮೈಸೂರು,ಡಿಸೆಂಬರ್,2,2021(www.justkannada.in): ಮಗನ ಮೇಲಿನ ಸಿಟ್ಟಿಗೆ ಆತನ ತಂದೆ- ತಾಯಿಯನ್ನ ದುಷ್ಕರ್ಮಿಯೊಬ್ಬ ಕೊಚ್ಚಿ ಕೊಲೆಗೈದಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ನವಿಲೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈರಯ್ಯ ಅಲಿಯಾಸ್ ಕುಂಡ ಕೊಲೆ ಮಾಡಿದ ಆರೋಪಿ. ಎದುರು ಮನೆಯ ವಾಸವಿದ್ಧ ನಿಂಗಮ್ಮ(50) ಮತ್ತು ಮಾದಯ್ಯ(60)  ಕೊಲೆಯಾದವರು. ಈರಯ್ಯ ಕುಡಿದ ಅಮಲಿನಲ್ಲಿ ಗರ್ಭಿಣಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಕೈನಲ್ಲಿ ಲಾಂಗ್ ಹಿಡಿದು ಸಿಕ್ಕಸಿಕ್ಕವರ ಮೇಲೆ ಬೀಸಿ ಗಂಭೀರ ಹಲ್ಲೆ ನಡೆಸಿದ್ದು ಈ ವೇಳೆ ವೃದ್ಧ ದಂಪತಿಯನ್ನ ಹತ್ಯೆಗೈದಿದ್ದಾನೆ.

ಮೊದಲನೇ ಪತ್ನಿಯನ್ನು ಕೊಂದು ಜೈಲು ಸೇರಿ ನಂತರ  ಹೊರ ಬಂದಿದ್ದ ಈರಯ್ಯ,  ಕುಡಿದ ಅಮಲಿನಲ್ಲಿ 2ನೇ ಗರ್ಭಿಣಿ ಪತ್ನಿ ಮಹದೇವಮ್ಮರನ್ನ ಕೊಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಪತ್ನಿ ಮಹದೇವಮ್ಮಳ ತಾಯಿ ಮತ್ತು ತಂದೆಗೂ ಗಂಭೀರ ಹಲ್ಲೆ ನಡೆಸಿದ್ದಾನೆ.ಹಲ್ಲೆಯಾದ ಹಿನ್ನೆಲೆ ಗೌರಮ್ಮ, ಸುರೇಶ ಅಲಿಯಾಸ್ ಕೂಸು, ಮತ್ತೊಬ್ಬ ಮಹದೇವಮ್ಮ ಸ್ಥಿತಿ ಗಂಭೀರವಾಗಿದೆ.

ಇನ್ನು ಕೊಲೆಪಾತಕ ಈರಯ್ಯನನ್ನ ನಂಜನಗೂಡಿನ ಪೋಲಿಸರು ಬಂಧಿಸಿದ್ದಾರೆ. ಮೈಸೂರು ಎಸ್ಪಿ ಆರ್.ಚೇತನ್, ಡಿವೈಎಸ್ಪಿ ಗೋವಿಂದರಾಜ್, ಸರ್ಕಲ್ ಇನ್ಸ್‌ಪೆಕ್ಟರ್ ಲಕ್ಷ್ಮಿಕಾಂತ ತಳವಾರ್, ಇನ್ಸ್‌ಪೆಕ್ಟರ್ ಶಿವನಂಜಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: mysore-murder- elderly- couple- pregnant -wife

ENGLISH SUMMARY…

Saboteur kills elderly couple after attacking pregnant wife
Mysuru, December 2,2021 (www.juskannada.in): In a gruesome incident, a person has killed an elderly couple in a fit of rage against their son.
The incident has taken place in Naviluru Village in Nanjangud Taluk. The person is identified as Eeraiah, alias Kunda. The deceased couple is identified as Ningamma (50), and Madaiah (60). The couple was the criminal’s neighbours. Eeraiah who was said to be under the influence of alcohol also has attacked his pregnant wife injuring her grievously. He also tried to attack several others by brandishing a sword in his hand.
Eeraiah was earlier jailed as he had killed his first wife. He was out of jail. He attacked his second wife Mahadevamma under the influence of alcohol. In the melee, he killed Mahadevamma’s parents. The condition of three others Gowramma, Suresha, alias Koosu and Mahadevamma is also said to be serious.
The Nanjgud police have taken Eeraiah into custody. Mysuru SP R. Chetan, DySP Govindraj, Circle Inspector Lakhsmikanth Talawar, Inspector Shivananjashetty visited the spot and investigated.
Keywords: Crime/Naviluru/ Najangud/ elderly couple/ killed