ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿ ಮಾನವೀಯತೆ ಮೆರೆದ ಮೈಸೂರಿಗರು.

Promotion

ಮೈಸೂರು,ಜನವರಿ,3,2021(www.justkannada.in): ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡುವ ಮೂಲಕ ಮೈಸೂರಿನಲ್ಲಿ 25ಕ್ಕೂ ಹೆಚ್ಚು ಮಹಿಳೆಯರು ಮತ್ತು ಇಬ್ಬರು ಯುವಕರು ಮಾನವೀಯತೆ ಮೆರೆದಿದ್ದಾರೆ.

ನಟ ದಿ. ಪುನೀತ್ ರಾಜ್ ಕುಮಾರ್ ಸ್ಮರಣಾರ್ಥವಾಗಿ ನಿವೇದಿತಾ ನಗರ ಪಾರ್ಕ್ ನಲ್ಲಿ ಮೈಸೂರು ಮತ್ತು ಬ್ಯೂಟಿ ಅಸೋಸಿಯೇಷನ್ ನಿಂದ ಹೇರ್ ಡೊನೇಟ್ ಶಿಬಿರ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಚಿತ್ರ ನಟಿ ರಿಷಿಕಾ ರಾಜ್ ಅವರು ಸ್ವತಃ ಹೇರ್ ಡೊನೇಟ್ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಯಶ್ ಟೆಲ್ ವಾಹಿನಿ ಸಿಬ್ಬಂದಿ ಸ್ವರ್ಣ ಹಾಗೂ ಬಾಲಕಿ ಮನಸು ಮೋಹನ್ ಹೇರ್ ಡೊನೇಟ್ ಮಾಡಿದ್ದು ಈ ವೇಳೆ ಇಬ್ಬರನ್ನು ಮೈಸೂರು ಮತ್ತು ಬ್ಯೂಟಿ ಅಸೋಸಿಯೇಷನ್  ಸನ್ಮಾನಿಸಿತು. ಕಾರ್ಯಕ್ರಮದಲ್ಲಿ 25 ಕ್ಕೂ ಹೆಚ್ಚು ಮಹಿಳೆಯರು ಇಬ್ಬರು ಯುವಕರು ಕೇಶದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್ , ಬ್ಯೂಟಿ ಅಸೋಸಿಯೇಷನ್ ಅಧ್ಯಕ್ಷೆ ಉಮಾ ಜಾದವ್, ಕಾರ್ಯದrfSi ಜ್ಯೋತಿ ಸೇರಿದಂತೆ ಹಲವರ ಉಪಸ್ಥಿತರಿದ್ದರು.

Key words: Mysorers – humanity – Hair Donate-cancer-patient