ಕುದುರೆ ರೇಸ್ ಬೆಟ್ಟಿಂಗ್  ನಲ್ಲಿ ತೊಡಗಿದ್ದ ಮೂವರ ಬಂಧನ…

Promotion

ಬೆಂಗಳೂರು, ಮಾರ್ಚ್,4,2021(www.justkannada,in): ಕುದುರೆ ರೇಸ್ ಬೆಟ್ಟಿಂಗ್  ನಲ್ಲಿ ತೊಡಗಿದ್ದ ಮೂವರನ್ನ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವರುಣ್, ನಂದೀಶ್, ಜೀವನ್ ಬಂಧಿತ ಆರೋಪಿಗಳು. ಬಂಧಿತರು ಚಂದ್ರಾ ಲೇಔಟ್ ಮನೆಯೊಂದರಲ್ಲಿ ಕುದುರೆ ರೇಸ್ ಬೆಟ್ಟಿಂಗ್ ನಲ್ಲಿ ತೊಡಗಿದ್ದರು. ಈ ವೇಳೆ ಪೊಲೀಸರು ದಾಳಿ ನಡೆಸಿ ಮೂವರನ್ನ ಬಂಧಿಸಿದ್ದಾರೆ. ಬಂಧಿತರಿಂದ 1.90 ಲಕ್ಷ ನಗದು, ಮೂರು ಮೊಬೈಲ್ ಗಳನ್ನ ವಶಕ್ಕೆ ಪಡೆದಿದ್ದಾರೆ.arrest -three - horse race- betting-bangalore

ಈ ಕುರಿತು ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: arrest -three – horse race- betting-bangalore