ಕಾಂಗ್ರೆಸ್ ನಾಯಕರು ಖಾಲಿ ಡಬ್ಬ ಬಡಿಯುತ್ತಿದ್ದಾರೆ-  ಸಚಿವ ಕೆ.ಎಸ್ ಈಶ್ವರಪ್ಪ ಟೀಕೆ.

Promotion

ಶಿವಮೊಗ್ಗ,ನವೆಂಬರ್,13,2021(www.justkannada.in):  ಬಿಟ್ ಕಾಯಿನ್ ದಂಧೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಆರೋಪ ಮಾಡಿರುವ ಕಾಂಗ್ರೆಸ್ ಗೆ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಬಳಿ ಏನು ಇಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರು ಖಾಲಿ ಡಬ್ಬ ಬಡಿಯುತ್ತಿದ್ದಾರೆ.. ಅವರಿಗೆ ಮಾಡೋಕೆ ಏನು ಕೆಲಸ ಇಲ್ಲ ಎಂದು ವ್ಯಂಗ್ಯವಾಡಿದರು.

ಶಿವಮೊಗ್ಗದಲ್ಲಿ ಈ ಕುರಿತು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಬಿಟ್ ಕಾಯಿನ್ ದಂಧೆಯಲ್ಲಿ ಬಿಜೆಪಿ ನಾಯಕರು ಇಲ್ಲ. ಕಾಂಗ್ರೆಸ್ ನವರಿಗೆ ಮಾಡುವುದಕ್ಕೆ ಉದ್ಯೋಗ ಇಲ್ಲ. ಹೀಗಾಗಿ ಬಿಟ್ ಕಾಯಿನ್ ವಿಚಾರ ಎತ್ತಿಕೊಂಡಿದ್ದಾರೆ  ಬಿಜೆಪಿ ನಾಯಕರಿರುವ ಬಗ್ಗೆ ದಾಖಲೆ ತೋರಿಸಲಿ. ದಾಖಲೆ ಕೊಟ್ಟರೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ.  ಸಿದ್ದರಾಮಯ್ಯ ಪ್ರಿಯಾಂಕ್ ಖರ್ಗೆ, ಡಿಕೆ ಶಿವಕುಮಾರ್ ಬಾಯಿ ಚಪಲಕ್ಕೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

Key words: bit coin- congress-minister-KS Eshwarappa