ಆಂಧ್ರದ ಮೂರು ರಾಜಧಾನಿಗಳ ಬಿಲ್  ಹಿಂಪಡೆದ ಸಿಎಂ ಜಗನ್ ಸರ್ಕಾರ.

Promotion

ಹೈದ್ರಬಾದ್‌,ನವೆಂಬರ್,22,2021(www.justkannada.in):  ಆಂಧ್ರದ ಪ್ರದೇಶದ ಮೂರು ರಾಜಧಾನಿ  ಬಿಲ್ ಅನ್ನು ಆಂದ್ರ ಸಚಿವ ಸಂಪುಟ ಹಿಂಪಡೆಯಲು ನಿರ್ಧರಿಸಿದೆ.

ಕೊನೆಗೂ ರೈತರ ಹೋರಾಟಕ್ಕೆ ಮಣಿದ ಸಿಎಂ  ಜಗನ್ ಮೂರು ರಾಜಧಾನಿ  ಬಿಲ್ ವಾಪಸ್ ಪಡೆದಿದ್ದಾರೆ. ಈ ಕುರಿತು ಅಡ್ವೊಕೇಟ್ ಜನರಲ್ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದು, ಕಾನೂನು ರದ್ದತಿ ಕುರಿತು ಜಗನ್ ವಿಧಾನಸಭೆಯಲ್ಲಿ ಹೇಳಿಕೆ ನೀಡಲಿದ್ದಾರೆ ಎಂದು ಎಜಿ ತಿಳಿಸಿದ್ದಾರೆ.ವಿಕೇಂದ್ರೀಕರಣ ಮತ್ತು ಸಿಆರ್ ಡಿಎ ರದ್ದತಿ ಮಸೂದೆಯನ್ನು ಸಚಿವ ಸಂಪುಟ ರದ್ದುಗೊಳಿಸಿದೆ ಎಂದು ತಿಳಿಸಿದ್ದಾರೆ.

ಈ ಮಧ್ಯೆ ಇಂದು ಕ್ಯಾಬಿನೆಟ್‌ ಸಭೆ ನಡೆಯಲಾಗುತ್ತಿದ್ದು, ಮುಖ್ಯಮಂತ್ರಿ ಜಗನ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.

Key words: CM- Jagan -Govt -withdrawing -bill – Andhra’s- three capitals.