ಸಚಿವರು ಮತ್ತು ಶಾಸಕರ ನಡುವೆ ಸೌಹಾರ್ದತೆ ಅಗತ್ಯ- ಬಸವರಾಜ ರಾಯರೆಡ್ಡಿ.

ಕಲ್ಬುರ್ಗಿ,ಆಗಸ್ಟ್,3,2023(www.justkannada.in): ಶಾಸಕರು ಮತ್ತು ಸಚಿವರ ನಡುವೆ ಸೌಹಾರ್ದತೆಯ ಅಗತ್ಯವಿದೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ಕಲ್ಬುರ್ಗಿಯಲ್ಲಿ ಇಂದು ಮಾತನಾಡಿದ ಶಾಸಕ ಬಸವರಾಜ ರಾಯರೆಡ್ಡಿ,  ದೆಹಲಿ ಸಭೆಗೆ ನಮಗೆ ಆಹ್ವಾನ ನೀಡದ ಬಗ್ಗೆ ಬೇಸರವಿಲ್ಲ. ಈ ಹಿಂದೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದವರನ್ನು ಸಭೆಗೆ ಕರೆದಿದ್ದರು. ನಮ್ಮಂತಹ ಹಿರಿಯ‌ರು ಕೆಲ ಸಚಿವರ ಬಳಿ ಮಾತನಾಡಲು ತೊಂದರೆ ಆಗುತ್ತಿದೆ. ಹೀಗಾಗಿ ಶಾಸಕಾಂಗ ಸಭೆ ಕರೆಯುವಂತೆ ಆಗ್ರಹಿಸಿ ಪತ್ರ ಬರೆದಿದ್ದೆವು ಎಂದು ಹೇಳಿದರು.

ರಾಜಕೀಯದಲ್ಲಿ ಸೀನಿಯರ್, ಜೂನಿಯರ್ ಪ್ರಶ್ನೆಯೇ ಬರಲ್ಲ. ತಮ್ಮ ಅದೃಷ್ಟ, ಪರಿಶ್ರಮದಿಂದ ಸಿದ್ಧರಾಮಯ್ಯ ಸಿಎಂ ಆದರು ಅಂತಾ ಹೇಳಿದ್ದೇನೆ. ಸಾಮಾಜಿಕ, ಪ್ರಾದೇಶಿಕ ವಿಚಾರ ಇಟ್ಟುಕೊಂಡು ಮಂತ್ರಿ ಮಾಡುತ್ತಾರೆ ಎಂದು ಬಸವರಾಜ ರಾಯರೆಡ್ಡಿ ತಿಳಿಸಿದರು.

Key words: friendliness- between -Ministers – MLAs – necessary- Basavaraja Rayareddy.