ತನಿಖಾ ತಂಡಕ್ಕೆ ಫ್ರಿಹ್ಯಾಂಡ್ ನೀಡಿದ್ದೇವೆ: ಪ್ರಕರಣದ ಹಿಂದೇ ಯಾರೇ ಇದ್ರೂ ಬಿಡಲ್ಲ- ಗೃಹ ಸಚಿವ ಅರಗ ಜ್ಞಾನೇಂದ್ರ.

ಕಲ್ಬುರ್ಗಿ,ಮೇ,6,2022(www.justkannada.in):  ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡಕ್ಕೆ ಫ್ರಿ ಹ್ಯಾಂಡ್ ನೀಡಿದ್ದೇವೆ. ಅಕ್ರಮದ ಹಿಂದೆ ಯಾರೇ ಇದ್ದರೂ ಬಿಡಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಕಲ್ಬುರ್ಗಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಪಿಎಸ್ ಐ ಪರೀಕ್ಷಾ ಅಕ್ರಮದಲ್ಲಿ ಡಿವೈಎಸ್ಪಿ  ಸೇರಿ ಹಲವರನ್ನ ಬಂಧಿಸಲಾಗಿದೆ. ಅನೈತಿಕ ಮಾರ್ಗ ಬಳಸಿದರೇ ಉಳಿಗಾಲ ಇಲ್ಲ ಅಕ್ರಮವಾಗಿ  ಹಣ ಮಾಡಲು ಹೋದರ ಬಿಡಲ್ಲ ಎಂದು ಎಚ್ಚರಿಕೆ ನೀಡಿದರು.

ಪಿಎಸ್ ಐ ಅಕ್ರಮ  ಹೇಸಿಗೆ ಮೂಡಿಸುತ್ತಿದೆ.  ಅಕ್ರಮದ ಹಿಂದೆ ಯಾರು ಇದ್ದರೂ ಹುಡುಕುತ್ತೇವೆ.  ಸಾಧಕರಿಗೆ ಅನ್ಯಾಯ ಆಗಬಾರದು. ತನಿಖಾ ತಂಡಕ್ಕೆ  ಫ್ರಿಹ್ಯಾಂಡ್ ನೀಡಿದ್ದೇವೆ. ಪ್ರಕರಣದ ಹಿಂದೆ ಯಾರೇ ಇದ್ದರೂ ಬಿಡಲ್ಲ.  ಕೆಲವರಿಂದಾಗಿ ಪರೀಕ್ಷೆ ರದ್ಧು ಮಾಡಲಾಗಿದೆ ಎಂದರು.

Key words: freehand – investigative- team-Home Minister-Araga Jnanendra.