ಬೆಂಗಳೂರಿನಲ್ಲಿ ಗೋಡೆ ಮೇಲೆ ಮತ್ತೆ ಫ್ರೀ ಕಾಶ್ಮೀರ ಬರಹ…

ಬೆಂಗಳೂರು,ಮಾ,2,2020(www.justkannada.in):  ಹುಬ್ಬಳ್ಳಿಯ ಕೆಎಲ್ ಇ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳಿಂದ ಪಾಕ್ ಪರ ಘೋಷಣೆ, ಬೆಂಗಳೂರಿನಲ್ಲಿ ಅಮೂಲ್ಯ, ಆರ್ದಾ ಪಾಕ್ ಪರ ಘೋಷಣೆ ಕೂಗಿದ ಬಳಿಕ ಇದೀಗ ಮತ್ತೆ ಗೋಡೆ ಮೇಲೆ ಫ್ರಿ ಕಾಶ್ಮೀರ ಬರೆಯಲಾಗಿದೆ.

ನಗರದ ಎನ್ ಸಿಸಿ ಕಚೇರಿಯಲ್ಲಿರುವ ಡಿಫೆನ್ಸ್ ಕಾಂಪೌಂಡ್ ಗೋಡೆಯ ಮೇಲೆ ಫ್ರೀ ಕಾಶ್ಮೀರ ಮತ್ತು ಸಿಎಎ ವಿರೋಧಿ ಹಾಗೂ ಪ್ರಧಾನಿ ಮೋದಿ ವಿರುದ್ದವಾಗಿ ಗೋಡೆ ಬರಹ ಬರೆಯಲಾಗಿದೆ. ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪ್ರತಿಮೆ ಬಳಿ ಇರುವ ಕಚೇರಿಯ ಗೋಡೆ ಮೇಲೆ ದುಷ್ಕರ್ಮಿಗಳು ಫ್ರೀಕಾಶ್ಮೀರ ಬರಹ ಬರೆದಿದ್ದಾರೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕ್ಷೇಪಾರ್ಹ ಬರಹ ಬರೆದ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಹುಬ್ಬಳ್ಳಿಯ ಕೆಎಲ್ ಇ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳಿಂದ ಪಾಕ್ ಪರ ಘೋಷಣೆ ಮೊಳಗಿತ್ತು . ಇದಾದ ನಂತರ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಅಮೂಲ್ಯ ಲಿಯೋನ್ ಪಾಕಿಸ್ತಾನ್ ಜಿಂದಾಬಾದ್, ಆನಂತ್ರ ಟೌನ್ ಹಾಲ್ ಬಳಿ ಫ್ರೀ ಕಾಶ್ಮೀರ ಬಿತ್ತಿಪತ್ರದ ಮೂಲಕ ಅರ್ದ್ರಾ ಪಾಕ್ ಪರ ಘೋಷಣೆ ಕೂಗಿದ ಘಟನೆ ನಡೆದಿತ್ತು.

Key words: Free Kashmir- writing – wall- again – Bangalore.